ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡಿರೋ ನೋಡಿರೋ ಸ್ವಾಮಿ ಶ್ರೀಪಾದ ಗೂಢಗುರುತವಾಗ್ಯದ ನಿಜಬೋಧ ಪ
ಕಣ್ಣಿನೊಳಗದ ಕಾಣುಗುಡುತಿದೆ ಕಣ್ಣೆ ಕಣ್ಣೆಗೆ ಕಾಣಿಸುತಿದೆ 1
ಝಗಝಗಿಸುತಿದೆ ಥಳಥಳಿಸುತಿದೆ ಬಗೆ ಬಗೆ ಭಾಸುತ ಹೊಳೆಯುತಲಿದೆ 2
ಕೇಳಬರುತದೆ ಹೇಳಗುಡುತದೆ ತಾಳ ಮೃದಂಗವು ಭೋರಿಡುತದೆ 3
ಏನೆಂದ್ಹೇಳಲಿ ಸ್ವಾನಂದ ಲೀಲೆ ಸ್ವಾನುಭವದಸುಖ ಆಲಿಸಿ ಕೇಳಿ 4
ಮಾಯಾಕಾರಗಿದು ಕೈಯಲಿಗೂಡದು ಮಹಿಪತಿ ಸ್ವಾಮಿದಯಕೆ ಒದಗುವದು 5
****