ಮರುಗ ಮೊಲ್ಲೆ ಮಲ್ಲಿಗೆ ಜಾಜಿ ಸಂಪಿಗೆ।
ತುರುಬಿಲೊಪ್ಪುವ ಚಂಡಾರುತನ ಮಾಣಿಕದ।
ಮರೆವ ಚಂದ್ರಸೂರಿಯ ಮುಡಿಯಲೊಪ್ಪೆ।
ಕುರುಳು ಕೂದಲು ಬೈತಲೆ ಥಳಪುಗಳ।
ಮೃಗನಾಭಿತಿಲಕ ನೊಸಲಲಿ ಹಚ್ಚಬಟ್ಟು।
ಮದನ ಸಿಂಗಾಡಿ ಸೋಲಿಸುವ ಪರ್ಬುಗಳ।।
ನಿರುತ ಸೋವಿಪ ನಮ್ಮ ಗುರು ಮಧ್ವಮುನಿಯ ಹೃದಯ
ಕಮಲವಾಸವಾಗಿಪ್ಪ ಕೃಷ್ಣನ ಪದುಮ ಚರಣಕ್ಕೆ ನಮೋ ನಮೋ
ಎಂಬೆನಾ।।
******