Showing posts with label ಕೇಳಯ್ಯ ರಂಗಯ್ಯ ತಮ್ಮವರೆಂದು ತಾಳಿ ಸುಮ್ಮನಿರುವವರಲ್ಲ rukmesha. Show all posts
Showing posts with label ಕೇಳಯ್ಯ ರಂಗಯ್ಯ ತಮ್ಮವರೆಂದು ತಾಳಿ ಸುಮ್ಮನಿರುವವರಲ್ಲ rukmesha. Show all posts

Thursday, 5 August 2021

ಕೇಳಯ್ಯ ರಂಗಯ್ಯ ತಮ್ಮವರೆಂದು ತಾಳಿ ಸುಮ್ಮನಿರುವವರಲ್ಲ ankita rukmesha

 ..

kruti by rukmangadaru

ಕೇಳಯ್ಯ ರಂಗಯ್ಯ ಪ


ತಮ್ಮವರೆಂದು ತಾಳಿ | ಸುಮ್ಮನಿರುವವರಲ್ಲ ||ಹಮ್ಮಿಲಿ ಹರಿಸಿ ಬಂದು ನಮ್ಮನೆ ದೂರುವರೋ 1

ಮೊಸರನ್ನೆಲ್ಲ ಸುರಿದಾನೆಂದುಸುರು ಹಾಕಿದರೆ |ನಮ್ಮ ಹೆಸರಿಗೆ ಮರಗಿ ಮುಖವು ಹಸಿರಿಡುದಯ್ಯಾ 2

ಬಾಲಕರ ಹೆಗಲನೇರಿ | ಪಾಲನೆಲ್ಲವಕಿತ್ತೆಳೆದು |ಬಾಲೇರ ಬಳಲಿಸುವದು ಬಾಲ ಬೇಕೇನೋ 3

ಸರಿಯಿಲ್ಲದವರ ಕೂಡ | ಮರೆಯಿಲ್ಲದೆ ಮಾತಾಡಿ |ಸೆರಗ ಸೆಳೆದರೆ ನಮ್ಮ ಹಿರಿಯತನವೇನೋ 4

ಚಿಕ್ಕತರದವರು ನಮಗೆ | ಸೊಕ್ಕಿನವನೆಂಬುವರು |ರುಕ್ಮಭೂಷಗೆ ಈ ಮಾತು ತಕ್ಕದಹುದೇನೋ 5

***