Showing posts with label ಪವಮಾನ ಸದಾ ಸಲಹೈ ಪ್ರೇಮಾಂಬುಧಿಯೆ ತವಪಾದವ ನಂಬಿದೆನೈ ನೀ ಪಾಲಿಸು ದಾತ shyamasundara. Show all posts
Showing posts with label ಪವಮಾನ ಸದಾ ಸಲಹೈ ಪ್ರೇಮಾಂಬುಧಿಯೆ ತವಪಾದವ ನಂಬಿದೆನೈ ನೀ ಪಾಲಿಸು ದಾತ shyamasundara. Show all posts

Wednesday, 1 September 2021

ಪವಮಾನ ಸದಾ ಸಲಹೈ ಪ್ರೇಮಾಂಬುಧಿಯೆ ತವಪಾದವ ನಂಬಿದೆನೈ ನೀ ಪಾಲಿಸು ದಾತ ankita shyamasundara

 ..

ಪವಮಾನಸದಾ ಸಲಹೈ | ಪ್ರೇಮಾಂಬುಧಿಯೆ

ತವಪಾದವ ನಂಬಿದೆನೈ | ನೀ ಪಾಲಿಸು ದಾತ ಪ

ಹರಿಕುಲೇಶ ಸಿರಿವರನ | ಚರಣಧ್ಯಾನಗೈಯದಲೆ

ಕರುಣಸಿಂಧು ಜ್ಞಾನಪದ ಪಥಕಾಣಿ |

ಕೊನೆಗೆ ತೋರೋ ಎನಗೆ 1

ನಾನೆಂಬೋ ಗರ್ವದಲಿ | ಶ್ರೀನಾಥನ ಪದ ಪೊಂದದೆ

ಹೀನತನದಿ ಕಾಲಕಳೆದೆ | ಮಾಣದೆ ನೋಡಿಂದಿನಾ ದಿನದಿ 2

ಶ್ರೀ ಶಾಮಸುಂದರನ ದಾಸಾಗ್ರಣಿ | ಪವಿಸಮಾಂಗ

ಶ್ವಾಸದೊಡೆಯೆ ಕೊರವಿಯ | ಪೋಷಿಸು ಗುರು ನಾವಂದಿಪೆ 3

***