Showing posts with label ವಂದಿಸೋ ಎಲೆ ಮಾನವಾ ಮಾಣದೆ ಸದಾ shyamasundara vidyamanya teertha stutih. Show all posts
Showing posts with label ವಂದಿಸೋ ಎಲೆ ಮಾನವಾ ಮಾಣದೆ ಸದಾ shyamasundara vidyamanya teertha stutih. Show all posts

Wednesday, 1 September 2021

ವಂದಿಸೋ ಎಲೆ ಮಾನವಾ ಮಾಣದೆ ಸದಾ ankita shyamasundara vidyamanya teertha stutih

 ..

ವಂದಿಸೋ ಎಲೆ ಮಾನವಾ ಮಾಣದೆ ಸದಾ

ಒಂದೆ ಮನದಿ ಶ್ರೀವಿದ್ಯಾಮಾನ್ಯ ಮುನೀಂದ್ರರ ಪ


ಧರಣಿಯಂದದಿ ಕ್ಷಮಾಭರಿತ ಮಂಗಲದಾತ |

ಶರಧಿಯಂದದಿ ದಯಾಗುಣಶೀಲರೋ | ಸುರ

ನದಿಯಂದದಿ ದುರಿತಪರಿಹಾರಕರು | ತರಣಿ

ಯಂದದಿ ಭಾರ ತಿಮಿರನೋಡಿಸುವರೋ 1


ಈಶನಂದದಿ ಜಿತಪೂಶರವರ |

ಕಮ | ಲಾ ಸನನಂತೆ ಭೂಸುರ ಶ್ರೇಷ್ಟರು |

ಸಾಸಿರ ಮುಖನಂತೆ ಯೋಗಸುಸಾಧಕರು

ಭೇಶನಂದದಿ ಸುಧಾಕರರಾಗಿ ತೋರ್ಪರೋ 2


ಶಾಮಸುಂದರವಿಠಲಸ್ವಾಮಿ ಉಪಾಸನೆ |

ನೇಮದಿಂದಲಿ ಸತತಗೈಯುತಲಿ

ಶ್ರೀಮಧ್ವಾರ್ಯರ ಶಾಸ್ತ್ರ ಸೋಮಪಾನದ

ಸುಖ | ಪ್ರೇಮದಿಂದಲಿ ದ್ವಿಜಸ್ತೋಮಕೆಗರೆವರು 3

***