Showing posts with label ಅಡಿಗಳ ಭಜಿಸುವ ಮನುಜರ ಬಿಡನೈ ತನ್ನ sirigurutandevarada vittala vishnuteertha stutih. Show all posts
Showing posts with label ಅಡಿಗಳ ಭಜಿಸುವ ಮನುಜರ ಬಿಡನೈ ತನ್ನ sirigurutandevarada vittala vishnuteertha stutih. Show all posts

Friday, 6 August 2021

ಅಡಿಗಳ ಭಜಿಸುವ ಮನುಜರ ಬಿಡನೈ ತನ್ನ ankita sirigurutandevarada vittala vishnuteertha stutih

 ..

Kruti by ಸಿರಿಗುರುತಂದೆವರದವಿಠಲರು sirigurutandevarada vittala  

ವಿಷ್ಣುತೀರ್ಥರು


ಅಡಿಗಳ ಭಜಿಸುವ ಮನುಜರ ಬಿಡನೈ ತನ್ನ ಪ


ಕಡು ಕರುಣೀ ಬಿಡು ಸ್ಮರಣೀ ನುಡಿ ಮನದೀ ಅಡವಿಗಳೊಡೆಯನ ಪದ ದೃಢದಿ ಪಿಡಿ ಮೂಢ ಮಾನವಾ ಅ.ಪ.


ಕಂಕಣ ಕಟ್ಟೀ ಬಿಂಕವ ಮುರಿಯುತ ಕಿಂಕರ ಸಲಹುವ ಪಂಕಜನಯ್ಯನ ಪಂಕಜದೊಳು ತಾ ಮಿಂಚಿನಂದದಿ ಕಂಗಳಿಗೊಪ್ಪುವ ಮಂಗಳಾ ಮಂಟಪದಲಿ ಮೀನಾಂಕನ ಸಹತೋರುವ ಮದಗಜಸಿಂಹನು ಮಾದನೂರಿನಲಿ ನಿಂತಿಹ ಪವನತನಯನು ಕಮಲನಯನನು ಕರಾಳವದನ ಪರಕಪಾಲನಯನನು 1


ಧೀರನಾಗಿ ಪರದಾರರಿಗೋಸುಗ ಬಲು ಕ್ರೂರನಾಗಿ ಇರುವೋನು ಸೂರಿಪುರೇಶನ ಸಲಹುವ ಸತಿ ಪಾರ್ವತಿವರನು ಮಾರಹರಿಸಿ ಸುರಸಾರ ಮತೋದ್ಧರ ಸ್ವಾಮಿನಿಲಯ ಶ್ರೀ ಗುರುರಾಜರ ಪದ ಸ್ಮರಿಸುವನು ಶಿರದಲಿ ಜಾಹ್ನವಿ ಧರಿಸಿದ ಕೊರಳೊಳು ಶಿರಮಾಲೆ ಕರಮಾಲೆ ಜಟಬಾಲೆ ಸಹಕುಶನದಿ ನಿಲಯನಪದ ಹೃದಯದಿ ಸ್ಮರಿಸುತ 2


ಮೊಮ್ಮಗನೆನಿಸಿ ತಾತನ ಮೋಹಿಸಿ ದಾತನ ತಲೆ ತರಿದವನು ಮಹಾಮುನಿಪುರದೊಳು ತೆರಳಿದ ಸಮಯದಿ ತನ್ನ ಸತಿಯೊಳು ಸರಸವನಾಡಿದನು ಕಾಳಕೂಟವಾ ತಾ ಪಾನಮಾಡಿ ಗರಗೊರಳೆಂದೆನಿಸಿದನೂ ಶಿರಿಸುತ ತಂದೆವರದಗೋಪಾಲವಿಠಲನ ಪದ ಧೇನಿಪನೋ ಸೇವಿಪನೋ ಪಾವಿನ ಪದನೋ ವನದೊಳು ನಿಂದು ಶ್ರೀರಾಮನ ಜಪಿಸುವ 3

***