Showing posts with label ನೈವೇದ್ಯವ ಕೊಳ್ಳೊ ನಾರಾಯಣಸ್ವಾಮಿ purandara vittala NAIVEDYAVA KOLLO NARAYANASWAMY. Show all posts
Showing posts with label ನೈವೇದ್ಯವ ಕೊಳ್ಳೊ ನಾರಾಯಣಸ್ವಾಮಿ purandara vittala NAIVEDYAVA KOLLO NARAYANASWAMY. Show all posts

Monday, 6 December 2021

ನೈವೇದ್ಯವ ಕೊಳ್ಳೊ ನಾರಾಯಣಸ್ವಾಮಿ purandara vittala NAIVEDYAVA KOLLO NARAYANASWAMY



ನೈವೇದ್ಯವ ಕೊಳ್ಳೊ ನಾರಾಯಣಸ್ವಾಮಿ
ದಿವ್ಯ ಷಡುರಸಾನ್ನವನಿಟ್ಟೆನೋ

ಘಮ ಘಮಿಸುವ ಶಾಲ್ಯನ್ನ ಪಂಚ ಭಕ್ಷ್ಯ
ಅಮೃತ ಕೂಡಿದ ದಿವ್ಯ ಪರಮಾನ್ನವೋ
ರಮಾ ದೇವಿಯರು ಸ್ವಹಸ್ತದಿ ಮಾಡಿದ ಪಾಕ
ಭೂಮಿ ಮೊದಲಾದ ದೇವಿಯರು ಸಹಿತೌತಣ

ಅರವತ್ತು ಶಾಕ ಲವಣ ಶಾಕ ಮೊದಲಾದ
ಸರಸ ಮೊಸರು ಬುತ್ತಿ ಚಿತ್ರಾನ್ನವೋ
ಪರಮ ಮಂಗಳ ಅಪ್ಪಾವು ಅತಿರಸ
ಹರುಷದಿಂದಲಿ ಇಟ್ಟ ಹೊಸ ತುಪ್ಪವೋ

ಒಡೆಯಂಬೊಡೆ ದಧಿವಡೆಯು ತಿಂಥಿಣಿ
ಒಡೆಯ ಎಡೆಗೆ ಒಡನೆ ಬಡಿಸಿದೆ
ದೃಢವಾದ ಪದಾರ್ಥಂಗಳನೆಲ್ಲ ಇಡಿಸಿದೆ
ಒಡೆಯ ಶ್ರೀ ಪುರಂದರ ವಿಠಲನೆ ಉಣ್ಣೋ
***

pallavi

naivEdyava koLLo nArAyaNasvAmi divya SaDurasAnnavaniTTenO

caraNam 1

ghama ghamisuva shAlyanna panca bhakSya amrta kUDida divya paramAnnavO
ramA dEviyaru svahastadi mADida pAka bhUmi modlAda dEviyaru sahiteLataNa

caraNam 2

aravattu shAka lavaNa shAka modalAda sarasa mosaru butti citrAnnavO
parama mangaLa appavu atirasa haruSadindaliyiTTa hosa tuppavO

caraNam 3

oDeyamboDe tithivaDeyu tinthiNi oDeya eDage oDene baDiside
drDhavAda padArttangaLanella iDiside oDeya shrI purandara viTTalane uNNO
***

ನೈವೇದ್ಯವ ಕೊಳ್ಳೊ ನಾರಾಯಣಸ್ವಾಮಿ 
ದಿವ್ಯ ಷಡುರಸಾನ್ನವನಿಟ್ಟೆನೊ ಪ.

ಘಮಘಮಿಸುವ ಶಾಲ್ಯನ್ನ ಪಂಚಭಕ್ಷ್ಯಅಮೃತಕೂಡಿದ ದಿವ್ಯ ಪರಮಾನ್ನವು ||ರಮಾದೇವಿಯು ಸ್ವಹಸ್ತದಿ ಮಾಡಿದ ಪಾಕಭೂಮಿ ಮೊದಲಾದ ದೇವಿಯರ ಸಹಿತ ತಾನು 1

ಅರವತ್ತು ಶಾಕ ಲವಣ ಶಾಕ ಮೊದಲಾದಸರಸ ಮೊಸರುಬುತ್ತಿ ಚಿತ್ರಾನ್ನವಪರಮ ಮಂಗಳ ಅಪ್ಪಾಲು ಅತಿರಸಗಳಹರುಷದಿಂದಲಿ ಇಟ್ಟ ಹೊಸ ತುಪ್ಪವ 2

ವಡೆಯಂಬೋಡಿಯು ದಧಿವಡೆಯ ತಿಂಢಿಣಿಒಡೆಯಸೆ ಬಡಿಸಿದೆ ಅಧಿಕವಾಗಿ ||ದೃಢವಾದ ಪಡಿಪದಾರ್ಥವನೆಲ್ಲ ಇಡಿಸಿದೆಒಡೆಯ ಶ್ರೀ ಪುರಂದರವಿಠಲ ನೀನುಣ್ಣೊ 3
***

ರಾಗ ಆನಂದಭೈರವಿ. ಆದಿ ತಾಳ (raga tala may differ in audio)