ಮಧ್ವರಾಯರೆ ನಿಮ್ಮ ಮುದ್ದು ಪಾದಗಳಿಗೆ
ಬಿದ್ದು ಬೇಡಿಕೊಂಬೆ ಮನಶುದ್ಧಿಯ ಮಾಡೊ ಪ.
ಮಧ್ವ ಗೇಹದೊಳು ಜನಿಸಿ ಪಾಜಕಾ ಕ್ಷೇತ್ರದೊಳು
ಮುದ್ದು ರೂಪವ ತೋರಿ ಅ. ಪ.
ಪದ್ಮನಾಭನ ಭಜಿಸುತ ಇರುತ ಗುಹೆಯಲಿ
ಶುದ್ಧ ತಪವನೆ ಮಾಡಿ ಪ್ರಸಿದ್ಧಿಯಿಂದಲಿ
ಇದ್ದ ದೈತ್ಯನ ಕೊಂದು ಪೊರೆಯುತಲಿ 1
ವಾದಿಗಳ ಛೇದ ಭೇದವ ಮಾಡಿ
ಸಾಧಿಸಿನುತವ ಬೋೀಧಿಸಿ ಸುಜನರಿಗೆ
ವ್ಯಾಧಿಗಳ ಕಳೆದು ಪೊರೆವ ಮೆರೆವ 2
ಸುಜ್ಞಾನ ತೀರ್ಥರೆಂದೆನಿಸಿ ಮಹಿಯೊಳ್
ಅಜ್ಞಾನ ಪರಿಹರಿಸಿ ಪೊರೆವ ಗುರು
ಸುಜ್ಞಾನವೀವ ರುಕ್ಮಿಣೀಶವಿಠಲನ ಭಜಿಪ 3
***