Showing posts with label ಉರಗಾದ್ರಿವಾಸವಿಠ್ಠಲ ನೀನವನ ಪರಮಾದರದಿ ಕಾಪಾಡೋ ಹರಿಯೇ tandemuddu mohana vittala uragadri vittala stutih. Show all posts
Showing posts with label ಉರಗಾದ್ರಿವಾಸವಿಠ್ಠಲ ನೀನವನ ಪರಮಾದರದಿ ಕಾಪಾಡೋ ಹರಿಯೇ tandemuddu mohana vittala uragadri vittala stutih. Show all posts

Saturday, 1 May 2021

ಉರಗಾದ್ರಿವಾಸವಿಠ್ಠಲ ನೀನವನ ಪರಮಾದರದಿ ಕಾಪಾಡೋ ಹರಿಯೇ ankita tandemuddu mohana vittala uragadri vittala stutih

 ಶ್ರೀ ಶ್ರೀನಿವಾಸರಾಯರ ಯೋಗ್ಯತೆಯನ್ನರಿತ ಶ್ರೀ ತಂದೆ ಮುದ್ದುಮೋಹನದಾಸರು ಅವರಿಗೆ " ಉರಗಾದ್ರಿವಾಸವಿಠ್ಠಲ " ಎಂಬ ಅಂಕಿತೋಪದೇಶವನ್ನು ನೀಡಿ ಪರಮಾನುಗ್ರಹ ಮಾಡಿದರು.

" ಅಂಕಿತ ಪದ " ..... 


ಉರಗಾದ್ರಿವಾಸವಿಠ್ಠಲ 

ನೀನವನ ।

ಪರಮಾದರದಿ ಕಾಪಾಡೋ 

ಹರಿಯೇ ।। ಪಲ್ಲವಿ ।। 

ಗುರು ಕರುಣವನು 

ಪಡೆದು ಹರಿ ವಾಯು ।

ಗುರುಗಳ ಸೇವೆಯನೆಯಿತ್ತು 

ಕಾಪಾಡೋ ಹರಿಯೇ ।। ಅ. ಪ ।। 

ಗುರು ಕರುಣವೇ ಪಡೆಯದ 

ಸುರನರಾದ್ಯರಿಗೆ ।

ಹರಿ ಕರುಣ ದೊರೆಯ-

ದೆಂಬುದು ಸಿದ್ಧ ।

ನಿರುತ ದೃಢ ಮನವ 

ನೀನಿತ್ತು ಕಾಪಾಡೋ ಹರಿಯೇ ।।

ಹರಿ ನಿನ್ನ ದಾಸರಾದಾಸ್ಯವನು 

ಇತ್ತು ಸತತ ಕಾಪಾಡೋ ಹರಿಯೇ ।

ಪರಮ ಭಾಗವತರ 

ಸಂಗವನುಯಿತ್ತು ।

ಪರಮ ಕೃಪೆಯಿಂದ 

ರಕ್ಷಿಸೋ ಹರಿಯೇ ।। ಚರಣ ।। 

ಪಂಚ ರೂಪಾತ್ಮಕನ 

ಪಂಚ ರೂಪವನರುಹೀ ।

ಸಂಚಿತಾಗಮಿಗಳ ಹರಿಸಿ ।

ಮಿಂಚಿನಂದದಿ 

ಪೊಳೆಯೋ ಹರಿಯೇ ।।

ಗುರು ಶಿಷ್ಯ ಬಿಂಬೈಕ್ಯ 

ಚಿಂತನೆಯಿಂದ ।

ಹರಿ ವಾತು ಮತದಲ್ಲಿ ।

ನಿರುತ ಕಾಪಾಡೋ 

ಹರಿಯೇ ।। ಚರಣ ।। 

ಪರಮ ಭಾಗವತರನ್ನು 

ಹಿಂದೆ ರಕ್ಷಿಸಿದಂತೆ ನೀನವನ ।

ನಿರುತ ಕಾಪಾಡೋ ಹರಿಯೇ ।

ಪರಮ ಭಾಗವತರ ತಂದೆ -

ಮುದ್ದುಮೋಹನವಿಠ್ಠಲ । ಯಿನ್ನಿ ।।

ವನಲಿ ಒಂದಂಶದಲ್ಲಿ 

ಇದ್ದು ಹೃದಯಾಂಬರದಿ । 

ನಿನ್ನ ಬಿಂಬ ರೂಪವ 

ತೋರಿ ಕಾಪಾಡೋ 

ಹರಿಯೇ ।। ಚರಣ ।।

****