Saturday, 1 May 2021

ಉರಗಾದ್ರಿವಾಸವಿಠ್ಠಲ ನೀನವನ ಪರಮಾದರದಿ ಕಾಪಾಡೋ ಹರಿಯೇ ankita tandemuddu mohana vittala uragadri vittala stutih

 ಶ್ರೀ ಶ್ರೀನಿವಾಸರಾಯರ ಯೋಗ್ಯತೆಯನ್ನರಿತ ಶ್ರೀ ತಂದೆ ಮುದ್ದುಮೋಹನದಾಸರು ಅವರಿಗೆ " ಉರಗಾದ್ರಿವಾಸವಿಠ್ಠಲ " ಎಂಬ ಅಂಕಿತೋಪದೇಶವನ್ನು ನೀಡಿ ಪರಮಾನುಗ್ರಹ ಮಾಡಿದರು.

" ಅಂಕಿತ ಪದ " ..... 


ಉರಗಾದ್ರಿವಾಸವಿಠ್ಠಲ 

ನೀನವನ ।

ಪರಮಾದರದಿ ಕಾಪಾಡೋ 

ಹರಿಯೇ ।। ಪಲ್ಲವಿ ।। 

ಗುರು ಕರುಣವನು 

ಪಡೆದು ಹರಿ ವಾಯು ।

ಗುರುಗಳ ಸೇವೆಯನೆಯಿತ್ತು 

ಕಾಪಾಡೋ ಹರಿಯೇ ।। ಅ. ಪ ।। 

ಗುರು ಕರುಣವೇ ಪಡೆಯದ 

ಸುರನರಾದ್ಯರಿಗೆ ।

ಹರಿ ಕರುಣ ದೊರೆಯ-

ದೆಂಬುದು ಸಿದ್ಧ ।

ನಿರುತ ದೃಢ ಮನವ 

ನೀನಿತ್ತು ಕಾಪಾಡೋ ಹರಿಯೇ ।।

ಹರಿ ನಿನ್ನ ದಾಸರಾದಾಸ್ಯವನು 

ಇತ್ತು ಸತತ ಕಾಪಾಡೋ ಹರಿಯೇ ।

ಪರಮ ಭಾಗವತರ 

ಸಂಗವನುಯಿತ್ತು ।

ಪರಮ ಕೃಪೆಯಿಂದ 

ರಕ್ಷಿಸೋ ಹರಿಯೇ ।। ಚರಣ ।। 

ಪಂಚ ರೂಪಾತ್ಮಕನ 

ಪಂಚ ರೂಪವನರುಹೀ ।

ಸಂಚಿತಾಗಮಿಗಳ ಹರಿಸಿ ।

ಮಿಂಚಿನಂದದಿ 

ಪೊಳೆಯೋ ಹರಿಯೇ ।।

ಗುರು ಶಿಷ್ಯ ಬಿಂಬೈಕ್ಯ 

ಚಿಂತನೆಯಿಂದ ।

ಹರಿ ವಾತು ಮತದಲ್ಲಿ ।

ನಿರುತ ಕಾಪಾಡೋ 

ಹರಿಯೇ ।। ಚರಣ ।। 

ಪರಮ ಭಾಗವತರನ್ನು 

ಹಿಂದೆ ರಕ್ಷಿಸಿದಂತೆ ನೀನವನ ।

ನಿರುತ ಕಾಪಾಡೋ ಹರಿಯೇ ।

ಪರಮ ಭಾಗವತರ ತಂದೆ -

ಮುದ್ದುಮೋಹನವಿಠ್ಠಲ । ಯಿನ್ನಿ ।।

ವನಲಿ ಒಂದಂಶದಲ್ಲಿ 

ಇದ್ದು ಹೃದಯಾಂಬರದಿ । 

ನಿನ್ನ ಬಿಂಬ ರೂಪವ 

ತೋರಿ ಕಾಪಾಡೋ 

ಹರಿಯೇ ।। ಚರಣ ।।

****

No comments:

Post a Comment