bhuvanendra teertha rayara mutt yati 1799 stutih
ಶ್ರೀ ಭೂತರಾಜರ ಅಂಶ ಸಂಭೂತರಾದ ಶ್ರೀ ವರದ ಗೋಪಾಲದಾಸರು...
ರಾಗ : ಕಾಂಬೋಧಿ ತಾಳ : ಝಂಪೆ
ಭುವನದೊಳಗ್ಯಣೆಗಾಣೆ ನಿಮಗೆ ।
ಭುವನೇಂದ್ರ ಭೂಮ
ಸದ್ಗುಣ ಸಂಯಮೀಂದ್ರ ।। ಪಲ್ಲವಿ ।।
ಶಮದಲ್ಲಿ ದಮದಲ್ಲಿ
ಶಾಂತತ್ವ ಗುಣದಲ್ಲೀ ।
ಕಮನೀಯ ರೂಪದಲ್ಲಿ
ಕರಣ ಶುದ್ಧಿಯಲ್ಲೀ ।
ಯಮ ನಿಯಮಾಷ್ಟಾಂಗ
ಯೋಗ ಮೊದಲಾದಲ್ಲೀ ।
ವಿಮಲತರ ಮತಿಯಲ್ಲಿ
ವಿತರಣಗಳಲ್ಲೀ ।। ಚರಣ ।।
ವೇದ ವೇದಾಂಗಗಳ
ಪ್ರವಚನ ವಿಶೇಷದಲ್ಲೀ ।
ವಾದಿಗಳ ಗೆಲುವಲ್ಲಿ
ವರವ ಕೊಡುವಲ್ಲೀ ।
ಸಾದರದಿ ಸಕಲ
ವಾಕ್ಯಾರ್ಥ ಶೋಧನದಲ್ಲೀ ।
ಮೂದಲಿಸಿ ಮನ್ಮಥನ
ಮದವ ಮುರಿವಲ್ಲೀ ।। ಚರಣ ।।
ವರದೇಂದ್ರಯತಿ ಕುಲೇಂದ್ರರ
ಕುವರ ನಾ ನಿಮ್ಮ ।
ವರಣಿಸಲೊಶವೇ
ವರ ಗುಣಗಳ ।
ವರದ ಗೋಪಾಲವಿಠ್ಠಲ
ರಾಮ ವ್ಯಾಸ ಪದ ।
ಸರಸಿಜ ಸುಭೃಂಗ
ನಿಸ್ಸಂಗ ಮಂಗಳ ಮಹಿಮ ।। ಚರಣ ।।
****
No comments:
Post a Comment