Showing posts with label ಪಾಂಡುರಂಗನ ಈಕ್ಷಿಸುವ ಸುಖವೇ ಸಾಕು vijaya vittala. Show all posts
Showing posts with label ಪಾಂಡುರಂಗನ ಈಕ್ಷಿಸುವ ಸುಖವೇ ಸಾಕು vijaya vittala. Show all posts

Wednesday, 16 October 2019

ಪಾಂಡುರಂಗನ ಈಕ್ಷಿಸುವ ಸುಖವೇ ಸಾಕು ankita vijaya vittala

ಶ್ರೀ ವಿಜಯದಾಸರ ಕೃತಿ

 ರಾಗ ಅಭೇರಿ          ಆದಿತಾಳ 

ಪಾಂಡುರಂಗನ ಈಕ್ಷಿಸುವ ಸುಖವೇ ಸಾಕು ॥ ಪ ॥
ಅಪಾರಮಹಿಮ ಅನಂತಾನಂತರೂಪನ ॥ ಅ ಪ ॥

ಶಶಿನಖ ಸಾಲ್ಬೆರಳು ಪರಡುಜಾನು ಜಂಘೆ ।
ಎಸೆವ ಊರು ಕಟಿ ನಾಭಿ ಉದರ ಉರುತರ ಕಂಠ ॥
ಮಿಸಣಿಪ ವದನ ನಾಸ ಕದಪು ಕರ್ಣ ನಯನಾ ।
ನೊಸಲು ಶಿರ ಜಗವ ವ್ಯಾಪಿಸಿದ ರಕ್ಕಸಹರನ ॥ 1 ॥

ಮಕುಟಮಣಿಕುಂಡಲ ತಿಲಕ ಸರಿಗೆ ಕೌಸ್ತಭ ।
ವಿಕಸಿತಕಮಲ ತುಲಸಿಹಾರ ಮುತ್ತಿನಸರ, ಪ - ॥
ದಕ ಅಂಗದ ಕಂಕಣ ಮುದ್ರೆ ಕಟಿ ಸೂತ್ರ ।
ಸುಖದಂದಿಗೆ ಪೆಂಡೆ ಗೆಜ್ಜೆ ಸುಕುಮಾರನಾ ॥ 2 ॥

ಶ್ರುತಿತತಿಗೆ ದೂರ ಉನ್ನತಲೀಲ ಸಾಕಾರ ।
ಸತತ ಭಕ್ತರಾಧಾರ ಅಪ್ರಾಕೃತಶರೀರ ॥
ಯತಿಗಳ ಮನೋಹರ ಮತಿಗೆ ಅಗೋಚರ ।
ಪತಿತಪಾವನ ಸಿರಿಪತಿ ವಿಜಯವಿಠ್ಠಲನ ॥ 3 ॥
**********

ಪಾಂಡುರಂಗನ ಈಕ್ಷಿಸುವ ಸುಖವೇ ಸಾಕೂ 
ಅಪಾರ ಮಹಿಮ ಅನಂತಾನಂತ ರೂಪನಾ ll ಪ ll

ಶಶಿ ನಖ ನಾಲ್ಬೆರಳು ಎರಡು ಜಾನು ಜಂಘಿ 
ಎಸೆವ ಊರು ಕಟಿ ನಾಭಿ ಉದರ ಉರುತರ ಕಂಠಾ
ಮಿಸಣಿಪ ವದನ ನಾಸ ಕದಪು ಕರ್ಣ ನಯನಾ
ನೊಸಲು ಶಿರ ಜಗವ ವ್ಯಾಪಿಸಿದ ರಕ್ಕಸ ಹರನಾ ll 1 ll

ಮಕುಟ ಮಣಿ ಕುಂಡಲ ತಿಲಕ ಸರಿಗೆ ಕೌಸ್ತುಭ
ವಿಕಸಿತ ಕಮಲ ತುಲಸಿಹಾರ ಮುತ್ತಿನಸರ ಪ
ದಕ ಅಂಗದ ಕಂಕಣ ಮುದ್ರೆ ಕಟಿಸೂತ್ರ
ಸುಖದಂದಿಗೆ ಪೆಂಡೆಗೆಜ್ಜೆ ಸುಕುಮಾರನಾ ll 2 ll

ಶ್ರುತಿ ತತಿಗೆ ದೂರ ಉನ್ನತ ಲೀಲ ಸಾಕಾರ
ಸತತ ಭಕ್ತರಾಧಾರ ಅಪ್ರಾಕೃತ ಶರೀರ
ಯತಿಗಳ ಮನೋಹರ ಮತಿಗೆ ಅಗೋಚರ 
ಪತಿತಪಾವನ ಸಿರಿ ಪತಿ ವಿಜಯವಿಠಲನಾ ll 3 ll
********