Showing posts with label ಹಿಂದಿನ ಜನ್ಮಜನ್ಮಾಂತರದಿ ಮಾಡಿದ achalananda vittala suladi ಸುಳಾದಿ. Show all posts
Showing posts with label ಹಿಂದಿನ ಜನ್ಮಜನ್ಮಾಂತರದಿ ಮಾಡಿದ achalananda vittala suladi ಸುಳಾದಿ. Show all posts

Sunday, 8 December 2019

ಹಿಂದಿನ ಜನ್ಮಜನ್ಮಾಂತರದಿ ಮಾಡಿದ achalananda vittala suladi ಸುಳಾದಿ

ಹಿಂದಿನ ಜನ್ಮಜನ್ಮಾಂತರದಿ ಮಾಡಿದಘವ
ನಿವಾರಿಸುವರು ನಿನ್ನ ದಾಸರು
ಇಂದಣಪಾರ ದುರಿತ ದುರ್ಜಯ ದುಃಖವ
ದೂರ ಮಾಡುವರು ನಿನ್ನ ದಾಸರು
ಮುಂದಣ ಅಪಾರ ಆನಂದ ಸುಖವ
ಅನವರತ ಈವರು ನಿನ್ನ ದಾಸರು
ಯೆಂದು ಇಲ್ಲದಿರೆ ಬ್ಯಾರೆಗತಿಯುಂಟೆ
ನಿನ್ನನರಿವ ಬಗೆ ಮತ್ತುಂಟೆ ಎಲೆದೇವ
ನಂದನಂದನ ನಿನ್ನವರೆ ಜೀವನ
ಅಚಲಾನಂದವಿಠಲರೇಯ ಬ್ಯಾರೆಗತಿ ಮತ್ತುಂಟೆ 1

ಮಠ್ಯತಾಳ
ಭೂತದಯಾಪರ ನರನಾಥ ದೇವತೆಯೆಂಬರು
ಭೂತವಿರೋಧ ಮಾಡಿ ಕೈಯ್ಯಾತು ಬೇಡುವ ದೈವವ
ಸಾತ್ವಿಕವೆಂದು ಬಗೆವರು ಜನರು ಈ
ರೀತಿಯೇನೆಂಬೆ ಅಜಾತ ಸಕಲದೇವರ
ದಾತನೆ ಅಚಲಾನಂದವಿಠಲ ನೀನಿರೆ
ಸಾತ್ವಿಕವೆಂದು ಅನ್ಯದೈವವ ಈ
ಭೂತಳದ ಜನರು ಬಗೆವರು ಪ್ರತಿದಿನ 2

ತ್ರಿಪುಟತಾಳ
ಮಾನವನೆ ಕೇಳು ಕಬ್ಬಿಣ ಸೋಸಿ ಕಾಸಿ ಬಡಿಯಲು
ತಾನು ಪರುಷ ಸೋಕದೆ ಸುವರ್ಣ ಅಪ್ಪುದೇ
ಅನಾದಿ ಅವಿದ್ಯ ತಾಪದಿಂದ ಬೆಂದು
ತಾನು ನೀರೊಳು ಮಿಂದರೇ ಹೋಹುದೇನೊ
ಅನಾದಿದೈವ ಅಚಲಾನಂದವಿಠಲನ
ಧ್ಯಾನಮಾಳ್ಪರ ಪಾದಪರುಷ ಸೋಕದನಕ 3

ಅಟ್ಟತಾಳ
ಎನ್ನ ಹಳಿಯಲಿ ಉಗುಳಲಿ ಬಂಧುಗಳೆನ್ನ
ಮನ ರಂಗ ನಿನ್ನನೆ ನೆಚ್ಚಿಹ್ಯದೆನ್ನಮನ ಕೃಷ್ಣ
ನಿನ್ನನೆ ನಂಬಿಹ್ಯದೆನ್ನ ಮನ ಅಚಲಾನಂದವಿಠಲರೇಯ
ನಿನ್ನವರೊಲುಮೆಯ ಸಾರಿತೆನ್ನ ಮನ 4

ಆದಿತಾಳ
ಹಲವು ಮಾತೇನು ಹಲಧರನನುಜನ
ಚೆಲುವಿಕೆಯನೆ ಕಂಡು ಮನಸೋತೆನವ್ವ
ಕೆಲಬಲದಾ ಕುಲದವರೆನ್ನ ಹಳಿಯಲಿ
ಚಲಿಸದು ಚಿತ್ತ ಚಂಚಲವಾಗದೆನ್ನ ಮನ
ಕೆಲಚಿತಿ ವೆಂಣೆಲ್ಲ (?) ತಾನೊಲಿವಂತೆ ಮಾಡಿದ
ನಿಲುಕುವನಚಲಾನಂದವಿಠಲರೇಯ
ಕ್ಯಲಬಲದ ಕುಲದವರೆನ್ನ ಹಳಿಯಲಿ 5

ಜತೆ
ಬೆಂದ ಸಂಸಾರದಿ ಬಂದು ಬಂದು ಹೋದೆನೊ
ಇಂದೆನ್ನ ಸಲಹೊ ಅಚಲಾನಂದವಿಠಲ
***********