ಭೈರವಿ ರಾಗ ದಾದರಾ ತಾಳ
ಹಣ್ಣು ಕೊಳ್ಳಿರೋ ಪುಣ್ಯವಂತರು
ಹಣ್ಣು ಕೊಳ್ಳಿರಯ್ಯಾನಂತಗುಣಮಹಿಮೆಯುಳ್ಳ ||ಧ್ರುವ||
ಹಣ್ಣು ಬಂದದೆ ನೋಡ್ಯಾನಂದೋಬ್ರಹ್ಮಪ್ಯಾಟಿಯಿಂದ
ಕಣ್ದೆರೆದುಕೊಂಡವರು ಧನ್ಯ ಧನ್ಯರೊ ||೧||
ಹಣ್ಣಿಗೊಂದು ಹೆಸರು ಇಲ್ಲ ಇನ್ನೊಂದು ಕೊಸರು ಇಲ್ಲ
ಚೆನ್ನಾಗಿ ಉನ್ಮನವಾಗಿ ಹಣ್ಣು ||೨||
ಅಣ್ಣಗಳು ಬಂದುಕಣ್ಣುಗೆಟ್ಟು ಹೋಗಬ್ಯಾಡಿ
ಸಣ್ಣ ದೊಡ್ಡರೊಳಗಿಹ ಹಣ್ಣು ||೩||
ಉತ್ತಮರುದ್ದೇಶವಾಗಿ ಮತ್ತೆ ಹತ್ತುಬಾರೆ ಬಂದು
ತುತ್ತಿಗೊಮ್ಮೆ ಬಾಯಿದೆರೆವ ಹಣ್ಣು ||೪||
ಬಿತ್ತಿಬೆಳೆವ ಫಲವಲ್ಲ ಹೊತ್ತು ಮಾರುವದಲ್ಲ
ಚಿತ್ತದೊಳಗ್ಹತ್ತಿಲಿಹ ಹಣ್ಣು ||೫||
ನಾಲ್ಕು ಮಂದಿ ತಿಳಿಯದೆ ಹೋಕಹೋದರಾರು ಮಂದಿ
ಪುಕ್ಕಸಾಟಿ ದಣಿದರ್ಹದಿನೆಂಟು ಮಂದಿ ಕಾಣಿರೋ ||೬||
ಹಣ್ಣು ಕೊಂಡ ಮಹಿಪತಿಯು ಪುಣ್ಯಪೂರ್ವಾರ್ಜಿತ
ತಾ ಧನ್ಯ ಧನ್ಯನಾದ ಗುರುಕೃಪೆಯಿಂದ ಕಾಣಿರೋ ||೭||
****
ಹಣ್ಣು ಕೊಳ್ಳಿರೋ ಪುಣ್ಯವಂತರು
ಹಣ್ಣು ಕೊಳ್ಳಿರಯ್ಯಾನಂತಗುಣಮಹಿಮೆಯುಳ್ಳ ||ಧ್ರುವ||
ಹಣ್ಣು ಬಂದದೆ ನೋಡ್ಯಾನಂದೋಬ್ರಹ್ಮಪ್ಯಾಟಿಯಿಂದ
ಕಣ್ದೆರೆದುಕೊಂಡವರು ಧನ್ಯ ಧನ್ಯರೊ ||೧||
ಹಣ್ಣಿಗೊಂದು ಹೆಸರು ಇಲ್ಲ ಇನ್ನೊಂದು ಕೊಸರು ಇಲ್ಲ
ಚೆನ್ನಾಗಿ ಉನ್ಮನವಾಗಿ ಹಣ್ಣು ||೨||
ಅಣ್ಣಗಳು ಬಂದುಕಣ್ಣುಗೆಟ್ಟು ಹೋಗಬ್ಯಾಡಿ
ಸಣ್ಣ ದೊಡ್ಡರೊಳಗಿಹ ಹಣ್ಣು ||೩||
ಉತ್ತಮರುದ್ದೇಶವಾಗಿ ಮತ್ತೆ ಹತ್ತುಬಾರೆ ಬಂದು
ತುತ್ತಿಗೊಮ್ಮೆ ಬಾಯಿದೆರೆವ ಹಣ್ಣು ||೪||
ಬಿತ್ತಿಬೆಳೆವ ಫಲವಲ್ಲ ಹೊತ್ತು ಮಾರುವದಲ್ಲ
ಚಿತ್ತದೊಳಗ್ಹತ್ತಿಲಿಹ ಹಣ್ಣು ||೫||
ನಾಲ್ಕು ಮಂದಿ ತಿಳಿಯದೆ ಹೋಕಹೋದರಾರು ಮಂದಿ
ಪುಕ್ಕಸಾಟಿ ದಣಿದರ್ಹದಿನೆಂಟು ಮಂದಿ ಕಾಣಿರೋ ||೬||
ಹಣ್ಣು ಕೊಂಡ ಮಹಿಪತಿಯು ಪುಣ್ಯಪೂರ್ವಾರ್ಜಿತ
ತಾ ಧನ್ಯ ಧನ್ಯನಾದ ಗುರುಕೃಪೆಯಿಂದ ಕಾಣಿರೋ ||೭||
****
ಹಣ್ಣು ಕೊಳ್ಳಿರೋ ಪುಣ್ಯವಂತರು ಹಣ್ಣು ಕೊಳ್ಳಿರೋ ಹಣ್ಣು ಕೊಳ್ಳಿರಯ್ಯಾನ್ನಂತ ಗುಣಮಹಿಮೆಯುಳ್ಳ ಪ
ಹಣ್ಣು ಬಂದದೆ ನೋಡ್ಯಾನಂದೋ ಬ್ರಹ್ಮಾಪಾಟಿಯಿಂದ ಕಣ್ದೆರದು ಕೊಂಡವರು ಧನ್ಯ ಧನ್ಯರೊ 1
ಹಣ್ಣಿಗೊಂದು ಹೆಸರು ಇಲ್ಲ ಇನ್ನೊಂದು ಕೊಸರು ಇಲ್ಲ ಚೆನ್ನಾಗಿ ಉನ್ಮನವಾಗಿ ಹಣ್ಣ 2
ಅಣ್ಣಗಳ ಬಂದು ಕಣ್ಣುಗೆಟ್ಟು ಹೋಗಬ್ಯಾಡಿ ಸಣ್ಣ ದೊಡ್ಡರೊಳಗಿಹ್ಯ ಹಣ್ಣ 3
ಉತ್ತುಮರುದ್ದೇಶವಾಗಿ ಮತ್ತೆ ಹತ್ತುಭಾರೆ ತುತ್ತಿಗೊಮ್ಮೆ ಬಾಯಿದೆರೆವ ಹಣ್ಣು 4
ಬಿತ್ತಿಬೆಳೆದ ಫಲವಲ್ಲ ಹೊತ್ತುಮಾರುವದಲ್ಲ ಚಿತ್ತದೊಳಗ್ಹತ್ತಿಲಿಹ ಹಣ್ಣು 5
ನಾಲ್ಕು ಮಂದಿ ತಿಳಿಯದೆ ಹೋಕಹೋದರಾರು ಮಂದಿ ಪುಕ್ಕಸಾಟಿ ದಣಿದರ್ಹದಿನೆಂಟು ಮಂದಿ ಕಾಣಿರೋ 6
ಹಣ್ಣು ಕೊಂಡು ಮಹಿಪತಿಯ ಪುಣ್ಯ ಪೂರ್ವಾಜಿತ ತಾನೆಧನ್ಯ ಧನ್ಯವಾದ ಗುರುಕೃಪೆಯಿಂದ ಕಾಣಿರೋ 7
****