Showing posts with label ಅಗಲಿ ಸೈರಿಸಲಾರದೀ ಮನ purandara vittala. Show all posts
Showing posts with label ಅಗಲಿ ಸೈರಿಸಲಾರದೀ ಮನ purandara vittala. Show all posts

Tuesday, 3 December 2019

ಅಗಲಿ ಸೈರಿಸಲಾರದೀ ಮನ purandara vittala

ಅಗಲಿ ಸೈರಿಸಲಾರದೀ ಮನ |ಅಗಲದಿಪ್ಪುದೆ ಜೀವನ ||ಪೊಗರೊಗೆವ ನಗೆಮೊಗದ ಸೊಬಗಿನ |ಸುಗುಣಸಿರಿ ಗೋಪಾಲನ ಪ

ಮುನ್ನ ಸಂಸ್ಕøತಿಪಾಶದೊಳು ಬಿದ್ದನ್ಯಥಾರಕ್ಷಕರ ಕಾಣದೆ |ಬನ್ನಬಡುತಿಹ ಜನರನೀಕ್ಷಿಸಿ ಪೂರ್ಣ ಕರುಣಕಟಾಕ್ಷದಿ ||ತನ್ನ ನಾಮದ ಸುಧೆಯನುಣ್ಣಿಸಿ ತನ್ನ ಭಜನೆಯಸುಖವ ತೋರಿಸಿ |ತನ್ನ ದಾಸರ ಮಾಡಿ ಕೊಂಡಿಹ ಚೆನ್ನಸಿರಿಗೋಪಾಲನ 1

ಶೀಲಗುಣ ಕಥನಗಳನರಸದೆ ಕೀಳು ಚಾರಿತ್ರ್ಯಗಳ ಬಗೆಯದೆ |ಲೋಲಚಿತ್ತದಿ ಮಾಡುತಿಹ ಅಘಜಾಲ ಕೋಟಿಗಳೆಣಿಸದೆ ||ಕಾಲದಿಂ ಬಹುನಂಬಿದವರನು ಲೀಲೆಯಿಂದಭಿಮಾನಿಸುತ-ಪರಿ-|ಪಾಲಿಸುತ್ತಿಹ ಮಂಗಳಾತ್ಮಕ ಶೀಲ ಕಂಠಮೂರ್ತಿಯ 2

ಭಕ್ತಿ ಕರ್ಮಜಾÕನ ಯೋಗ ವಿರಕ್ತಿಯೆಂಬುದನೇನು ಕಾಣದೆ |ಮತ್ತೆ ಕೇವಲ ಮೂಢ ಭಾವದ ಚಿತ್ತದಲಿನೆರೆನಂಬಿದ ||ಆರ್ತರನು ಅಬಲರ ಅನಾಥರಜ ಮೃತುೈಮುಖದಿಂದವರತಾನೊಲಿ-|ದೆತ್ತಿ ಸಲಹುತಲಿಪ್ಪ ಸೊಬಗಿನ ಕೀರ್ತಿವಂತ ಮಹಾತ್ಮನ 3

ಕರುಣದಿಂದೆಳಗಂದಿ ಕರುವಿನ ಮೊರೆಯ ಲಾಲಿಸಿ ಬಿಡದೆ ತೃಪ್ತಿಯ |ಕರೆದು ಮಾಡುವ ಪರಿಯೆ ತನ್ನಯ ಸ್ಮರಿಸುತಿಹ ಕಡುದೀನರ ||ಹೊರಗೆ ಶಿಕ್ಷಿಸಿ ಒಳಗೆ ರಕ್ಷಿಸಿ ಪಿರಿದು ತನ್ನಯ ನಿಜನವರಿಗೆ |ತೆರುವ ಕರುಣಾಳುಗಳ ದೇವನ ಶರಣಜನ ಮಂದಾರನ 4

ನೇಮದಲಿ ನಂಬಿದರ್ಗೆ ಸೂಚಿಸಿ ಕಾಮವಾಸನೆಗಳನು ಖಂಡಿಸಿ |ಪಾಮರರ ಪಂಡಿತರ ಮಾಡಿ ಮಹಾಮಹಿಮೆಗಳ ತಿಳಿಸುತ ||ರಾಮರಮಣಿಯ ಸಹಿತ ಸಾಲಿಗ್ರಾಮದಲಿನೆರೆನೆಲಸಿ ಭಕುತರ |ಪ್ರೇಮದಿಂದಲಿ ಪೊರೆಯುತಿಹ ಸುಖಧಾಮ ಪುರಂದರವಿಠಲನ 5
***

pallavi

agali sairisalAradi mana agaladippude jIvana pogarogeva nagemogada sobagina suguNa siri gOpAlana

caraNam 1

munna samsmrti pAshadoLu biddanyadA rakSakara kANade binna baDutiha janarIkSisi pUrNa karuNAkaTAkSadi
tanna nAmada sudheyanuNNisi tanna bhajaneya sukhava tOrisi tanna dAsara mADi koNDiha cenna siri gOpAlana

caraNam 2

shIla guNakadhanagaLanarasade kILu cAridryagaLa bageyade lOlacittadi mADutiha aghajAla kOTigaLeNisade kAladim
bahu nambidavaranu lIleyindabhimAnasuta pari pAlisuttiha mangaLAtmaka shIla shrIkara mUrtiya

caraNam 3

bhakti karma jnAna yOga viraktiyembudanEnu kANade matte kEvala mUDhabhAvada cittadali nere nambida
Artaranu abalara anArthara mrtyu mugidindavara tAnolidetti salahutalippa sobagina kIrtivanta mahAtmana

caraNam 4

karuNadindeLagandi karuvina moreya lAlisi biDade trptiya karedu mADuva tannaya smarisutiha kaDudInara
horage shikSisi oLage rakSisi piridu tannaya nijavanarige teruva karuNALugaLa dEvana sharaNajana mandArana

caraNam 5

nEmadali nambidarge sucisi kAmavAsanegananu gaNDisi pAmarara paNDitara mADi mahAmahimegaLa tiLisuta
rAma ramaNiya sahita sAligrAmadali nere nelasi bhakutara prEmadindali poreyutiha sukhadAma purandara viTTalana
***