ರಾಗ ಬಿಲಹರಿ ರೂಪಕತಾಳ
Audio by Mrs. Nandini Sripad
ಶ್ರೀ ಜಗನ್ನಾಥದಾಸರ ಕೃತಿ
ಕೃಷ್ಣನ್ನ ನೋಡಿರೈ ಭಕ್ತಿಸಂತುಷ್ಟನ್ನ ಪಾಡಿರೈ ॥ ಪ ॥
ಕೃಷ್ಣೆಗೆ ಒಲಿದತಿ ದುಷ್ಟರಾಯರ ತರಿದ ।
ಜಗದೊಳು ಮೆರೆದ ॥ ಅ ಪ ॥
ನಂದವ್ರಜದಲಿ ಕಂದನಾಗಿ ತಾ ಬೆಳೆದ ।
ದೈತ್ಯರನಳಿದ ।
ವೃಂದಾವನದೊಳು ಇಂದುಮುಖಿಯರನು ಕೂಡಿ ।
ಪರಿಪರಿಯಾಡಿ ।
ಒಂದೊಂದು ಪರಿಲೀಲೆ ಸಂದೋಹಗಳ ತೋರಿಸಿದ ।
ಮೋಹ ಬೆರೆಸಿದ ॥
ಕಂದರ್ಪಪಿತ ತನ್ನ ಹೊಂದಿದ ಜನರನು ಕಾವಾ ।
ವರಗಳನೀವಾ ॥ 1 ॥
ಬಾಲೇರ ಮನೆಯಲಿ ಪಾಲು ಮೊಸರುಗಳ ಕದ್ದ ।
ತೀವ್ರದಿ ಮೆದ್ದ ।
ಕಾಲಕಾಲದಲ್ಲಿ ಗೋಪಾಲರ ಒಡಗೂಡಿ ಗೋವ ।
ಕಾಯ್ದನು ದೇವ ।
ಶೈಲವ ಬೆರಳಲಿ ತಾಳಿ ಗೋಕುಲವ ಪೊರೆದ ।
ಗರ್ವ ಮುರಿದ ॥
ಶ್ರೀಲೋಲುಪನು ವಿಶಾಲ ಮಹಿಮೆಗಳ ತೋರಿದ ।
ಸುರರಿಂದ ಮೆರೆದ ॥ 2 ॥
ಮಧುರಪಟ್ಟಣದಿ ಕದನ ಕರ್ಕಶರ ಕೊಂದ ।
ಸಚ್ಚಿದಾನಂದ ।
ಸದುಗುಣನಿಧಿಯ ಪಡೆದವಳ ಜನಕಗೆ ಪಟ್ಟ - ।
ಗಟ್ಟಿದ ಧಿಟ್ಟ ।
ಸುದತಿಯಗೋಸುಗ ಸುರಪನಪುರದಿಂದ ।
ಸುರತರು ತಂದ ॥
ಪದುಮಜಾಂಡಧರ ಜಗನ್ನಾಥವಿಠಲ ನೀತ ।
ತ್ರಿಗುಣಾತೀತ ॥ 3 ॥
***
Krushnanna nodirai baktisantushtanapadirai
Krushnageolidatidushtarayana taridaja +gadolumereda ||pa||
Nanda vrajadallikandanagita beledadaityaranalida
Vrundavanadoluindu mukiyaranu kudiparipariyadi
Ondondu parililesandohagalatorisida mohaberesida
Kandarpa pitatannahondidajanarannukava varagalaniva ||1||
Baleramaneyalli palumosarugala kaddativradimedda
Kala kaladali gopalaraodagudigo vakaydanudeva
Sailava beralalitaligo kulava poredagaruvamurida
Srilolupanuvisala mahimegala torida surarindamereda ||2||
Madhura pattan adikadanakarka sarakomndasaccidananda
Sadu gunanidhiya padedavalajanakag epattagattidaditta
Sudatiyago sugasurapana puradindasuratarutanda
Padumajandadhara jagannathavithalanitatri gunatita ||3||
***
ರಾಗ : ಭೈರವಿ ತಾಳ : ಅಟ್ಟ
pallavi
kruSNana nODirai bhakti santuSTanaa pADirai
anupallavi
kruSNege olidati duSTa rAyara taridA jagadoLu mereda
caraNam 1
nanda vrajadalli kandanAgi tT beLeda daityaranaLida
brundAvanadoLu indu mukhiyaranu kUDi paripariyADi
ondondu parilIle sandOhagaLa tOrisida mOha beresida
skandarpa pita tanna vandipa janara kAida varagaLa nIyda
caraNam 2
nArEra maneyali pAlu mosarugaLa kadda tIvradi medda
kAlakAladali gOpAlaroDigUDi gOva kAidanu dEva
shailava beraLali gALi gOpurava tarida garva murida
shrIlOla tanu vishAla mahimegaLa tOrda surarimmereda
caraNam 3
madhura paTTaNa kadana karkashara konda saccidAnanda
sadguNa paDedavaLa janakage paTTa kaTTida diTTa
sudhatiya gOsuga surapana puradinda surataru tanda
padumajANDadhara jagannAthaviThalanIta triguNAdIta
***
ಕೃಷ್ಣನ್ನ ನೋಡಿರೈ ಭಕ್ತಿಸಂತುಷ್ಟನ ಪಾಡಿರೈ
ಕೃಷ್ಣಗೆ ಒಲಿದತಿ ದುಷ್ಟರಾಯನ ತರಿದ ಜಗದೊಳು ಮೆರೆದ ।।ಪ॥
ನಂದವ್ರಜದಲ್ಲಿ ಕಂದನಾಗಿ ತಾ ಬೆಳೆದ ದೈತ್ಯರನಳಿದ
ವೃಂದಾವನದೊಳು ಇಂದುಮುಖಿಯರನು ಕೂಡಿ ಪರಿಪರಿಯಾಡಿ
ಒಂದೊಂದು ಪರಿ ಲೀಲೆ ಸಂದೋಹಗಳ ತೋರಿಸಿದ ಮೋಹ ಬೆರೆಸಿದ
ಕಂದರ್ಪಪಿತ ತನ್ನ ಹೊಂದಿದ ಜನರನ್ನು ಕಾವ ವರಗಳನೀವ ।।೧।।
ಬಾಲೇರ ಮನೆಯಲ್ಲಿ ಪಾಲು ಮೊಸರುಗಳ ಕದ್ದ ತೀವ್ರದಿ ಮೆದ್ದ
ಕಾಲಕಾಲದಲಿ ಗೋಪಾಲರ ಒಡಗೂಡಿ ಗೋವ ಕಾಯ್ದನು ದೇವ
ಶೈಲವ ಬೆರಳಲಿ ತಾಳಿ ಗೋಕುಲವ ಪೊರೆದ ಗರುವ ಮುರಿದ
ಶ್ರೀಲೋಲುಪನು ವಿಶಾಲ ಮಹಿಮೆಗಳ ತೋರಿದ ಸುರರಿಂದ ಮೆರೆದ।।೨।।
ಮಧುರಾಪಟ್ಟಣದಿ ಕದನ ಕರ್ಕಶರ ಕೊಂದ ಸಚ್ಚಿದಾನಂದ
ಸದುಗುಣನಿಧಿಯ ಪಡೆದವಳ ಜನಕಗೆ ಪಟ್ಟಗಟ್ಟಿದ ದಿಟ್ಟ
ಸುದತಿಯಗೋಸುಗ ಸುರಪನ ಪುರದಿಂದ ಸುರತರು ತಂದ
ಪದುಮಜಾಂಡಧರ ಜಗನ್ನಾಥ ವಿಠಲನೀತ ತ್ರಿಗುಣಾತೀತ ।।೩।।
********