ವಿಜಯದಾಸ
ನೋಡಿದೆ ನಾ ನೋಡಿದೆ
ಮಾಡಿದೆ ನಾ ಮಾಡಿದೆ ಪ
ಬೆಟ್ಟವ ಕಂಡೆನು ಸೋಪಾನಂಗಳು
ನಿಟ್ಟುಸುರಿಕ್ಕದೆ ಏರಿದೆ ಕಟ್ಟ
ಕಡಿಯಣ ಗೋಪುರ ಶಿಖರ
ದಿಟ್ಟಿಸಿ ಕಣ್ಣಿಲಿ ನೋಡಿದೆ 1
ಈ ಸಮಸ್ತರ ಗುರುವಾದ ಭಾರತಿ
ಈಶನ ಪಾದಕ್ಕೆ ಎರಗಿದೆ
ಕ್ಲೇಶನ ಕಳೆದು ಎದುರಾಗಿ ಪೊಳೆವ
ಶ್ರೀಶನ ಮಹದ್ವಾರ ನೋಡಿದೆ 2
ಬಲವಾಗಿ ಬಂದು ಸ್ವಾಮಿ ಪುಷ್ಕರಣಿ
ಒಳಗೆ ವರಹನ ನೋಡಿದೆ
ಜಲದಲಿ ಮಿಂದು ವೇಗದಲಿ ತಿರುವೆಂ
ಗಳ ದೇವನ ನೋಡ ಸಾಗಿದೆ 3
ಗುಡಿಯ ಪೊಕ್ಕೆನು ಗರುಡಗಂಬದ
ಸಡಗರವನು ನಾ ನೋಡಿದೆ
ಒಡನೆ ಪ್ರಾಣಾಚಾರದವರು
ಪಡೆದ ವರಗಳ ಕೇಳಿದೆ 4
ಮುನ್ನ ಅವಸರ ಮನಿಯೊಳಗೆ
ಅನ್ನಪೂರ್ಣಿಯ ನೋಡಿದೆ
ಚನ್ನಾಗಿ ಮಂಟಪದೊಳು ಶ್ರೀನಿವಾ
ಸನ್ನ ಮೂರುತಿಯ ನೋಡಿದೆ 5
ತೊಟ್ಟಲ ತೀರ್ಥವ ಕೊಂಡು ಪ್ರಸಾದ
ಇಟ್ಟು ಮಾರುವದು ನೋಡಿದೆ
ಇಷ್ಟ ಭಕ್ತರು ಸಮ್ಮುಖದಲಿ
ಮುಟ್ಟಿ ಪಾಡುವದು ನೋಡಿದೆ6
ದ್ವಾರಪಾಲಕರಿಗೆ ಸಾಷ್ಟಾಂಗದಲಿ ನಮ
ಸ್ಕಾರವನು ಮಾಡಿದೆ
ಭೋರನೆ ಕಟಾಂಜನದ ಫಲ್ಗುಣಿ ಬಂ
ಗಾರ ಬಾಗಿಲವ ನೋಡಿದೆ 7
ಇಂದು ರವಿ ಶತಕೋಟಿ ತೇಜದ
ವಿಂದ ಯುಗ್ಮವ ಪುಳಕೋತ್ಸಹÀದಿಂದ
ಸಂದರುಶನ ನಾ ಮಾಡಿದೆ 8
ಇಟ್ಟಿದ್ದ ಅಂದಿಗೆ ಉಟ್ಟ ಪೀತಾಂಬರ
ಕಟ್ಟಿದ್ದ ಧಟ್ಟಿ ವಢ್ಯಾಣ
ಝಟಿ ಕಂಕಣಾಕಾರದಾಲಾಯುಧ
ಇಟ್ಟ ಕಸ್ತೂರಿಯ ನೋಡಿದೆ 9
ಮಾಸದಾ ಪೂವು ಪೂಸಿದ ಗಂಧ
ಭೂಷಣಾ ನಾನಾ ಪರಿವಿಧ
ಏಸು ಬಗೆಯಲ್ಲಿಟ್ಟು ಶ್ರೀನಿ
ವಾಸನ ಶೃಂಗಾರ ನೋಡಿದೆ 10
ಜಯಜಯ ಜಗದೀಶ ಜಗನ್ನಿವಾಸ
ಜಯ ಜಯ ಲಕುಮಿ ಪರಿತೋಷ
ಜಯ ಜಯ ವಿನಾಶ ಜಯ ಜಯ ಸರ್ವೇಶ
ಜಯವೆಂದು ಸ್ತೋತ್ರವ ಮಾಡಿದೆ11
ಕೇಸಕ್ಕಿ ದಧ್ಯೋದನ ಪರಮಾನ್ನ
ದೋಶಿ ಬಿಸಿಬಿಸಿ ಮನೋಹರ
ಲೇಸಾಗಿ ಚತುರ್ವಿಧ ಪ್ರಸಾದವನ್ನು
ಈಸು ಅವಸರ ನೋಡಿದೆ 12
ಕರ್ಪೂರದಾರತಿ ವಪ್ಪಿನಿಂದಲಿ ತಂದು
ತಪ್ಪದಲಿ ಬೆಳಗೋದು ನೋಡಿದೆ
ರೆಪ್ಪೆಯವಿ ಹಾಕದೆ ಮನದಣಿಯ ತಿ
ಮ್ಮಪ್ಪನ ವಿಗ್ರಹ ನೋಡಿದೆ 13
ಹಿಮಋತು ಪ್ರಥಮ ಮಾಸÀ ದಶಮಿ
ಹಿಮಕರ ವಾರದದಿನದಲ್ಲಿ
ಕ್ರಮದಿಂದಲಿ ಪೋಗಿ ಬಿಂಬ ಮೂರುತಿಯ
ವಿಮಲ ಚಾರಿತ್ರವ ನೋಡಿದೆ 14
ಶತ ಅಪರಾಧವ ಮಾಡಲು ಕಳೆದು
ಪತಿ ವಿಜಯವಿಠ್ಠಲ ಪುರಂದರನ ಸಂ
ಗತಿಯಲ್ಲಿ ಸತತ ಸಾಕಿದಾ15
**********
ನೋಡಿದೆ ನಾ ನೋಡಿದೆ
ಮಾಡಿದೆ ನಾ ಮಾಡಿದೆ ಪ
ಬೆಟ್ಟವ ಕಂಡೆನು ಸೋಪಾನಂಗಳು
ನಿಟ್ಟುಸುರಿಕ್ಕದೆ ಏರಿದೆ ಕಟ್ಟ
ಕಡಿಯಣ ಗೋಪುರ ಶಿಖರ
ದಿಟ್ಟಿಸಿ ಕಣ್ಣಿಲಿ ನೋಡಿದೆ 1
ಈ ಸಮಸ್ತರ ಗುರುವಾದ ಭಾರತಿ
ಈಶನ ಪಾದಕ್ಕೆ ಎರಗಿದೆ
ಕ್ಲೇಶನ ಕಳೆದು ಎದುರಾಗಿ ಪೊಳೆವ
ಶ್ರೀಶನ ಮಹದ್ವಾರ ನೋಡಿದೆ 2
ಬಲವಾಗಿ ಬಂದು ಸ್ವಾಮಿ ಪುಷ್ಕರಣಿ
ಒಳಗೆ ವರಹನ ನೋಡಿದೆ
ಜಲದಲಿ ಮಿಂದು ವೇಗದಲಿ ತಿರುವೆಂ
ಗಳ ದೇವನ ನೋಡ ಸಾಗಿದೆ 3
ಗುಡಿಯ ಪೊಕ್ಕೆನು ಗರುಡಗಂಬದ
ಸಡಗರವನು ನಾ ನೋಡಿದೆ
ಒಡನೆ ಪ್ರಾಣಾಚಾರದವರು
ಪಡೆದ ವರಗಳ ಕೇಳಿದೆ 4
ಮುನ್ನ ಅವಸರ ಮನಿಯೊಳಗೆ
ಅನ್ನಪೂರ್ಣಿಯ ನೋಡಿದೆ
ಚನ್ನಾಗಿ ಮಂಟಪದೊಳು ಶ್ರೀನಿವಾ
ಸನ್ನ ಮೂರುತಿಯ ನೋಡಿದೆ 5
ತೊಟ್ಟಲ ತೀರ್ಥವ ಕೊಂಡು ಪ್ರಸಾದ
ಇಟ್ಟು ಮಾರುವದು ನೋಡಿದೆ
ಇಷ್ಟ ಭಕ್ತರು ಸಮ್ಮುಖದಲಿ
ಮುಟ್ಟಿ ಪಾಡುವದು ನೋಡಿದೆ6
ದ್ವಾರಪಾಲಕರಿಗೆ ಸಾಷ್ಟಾಂಗದಲಿ ನಮ
ಸ್ಕಾರವನು ಮಾಡಿದೆ
ಭೋರನೆ ಕಟಾಂಜನದ ಫಲ್ಗುಣಿ ಬಂ
ಗಾರ ಬಾಗಿಲವ ನೋಡಿದೆ 7
ಇಂದು ರವಿ ಶತಕೋಟಿ ತೇಜದ
ವಿಂದ ಯುಗ್ಮವ ಪುಳಕೋತ್ಸಹÀದಿಂದ
ಸಂದರುಶನ ನಾ ಮಾಡಿದೆ 8
ಇಟ್ಟಿದ್ದ ಅಂದಿಗೆ ಉಟ್ಟ ಪೀತಾಂಬರ
ಕಟ್ಟಿದ್ದ ಧಟ್ಟಿ ವಢ್ಯಾಣ
ಝಟಿ ಕಂಕಣಾಕಾರದಾಲಾಯುಧ
ಇಟ್ಟ ಕಸ್ತೂರಿಯ ನೋಡಿದೆ 9
ಮಾಸದಾ ಪೂವು ಪೂಸಿದ ಗಂಧ
ಭೂಷಣಾ ನಾನಾ ಪರಿವಿಧ
ಏಸು ಬಗೆಯಲ್ಲಿಟ್ಟು ಶ್ರೀನಿ
ವಾಸನ ಶೃಂಗಾರ ನೋಡಿದೆ 10
ಜಯಜಯ ಜಗದೀಶ ಜಗನ್ನಿವಾಸ
ಜಯ ಜಯ ಲಕುಮಿ ಪರಿತೋಷ
ಜಯ ಜಯ ವಿನಾಶ ಜಯ ಜಯ ಸರ್ವೇಶ
ಜಯವೆಂದು ಸ್ತೋತ್ರವ ಮಾಡಿದೆ11
ಕೇಸಕ್ಕಿ ದಧ್ಯೋದನ ಪರಮಾನ್ನ
ದೋಶಿ ಬಿಸಿಬಿಸಿ ಮನೋಹರ
ಲೇಸಾಗಿ ಚತುರ್ವಿಧ ಪ್ರಸಾದವನ್ನು
ಈಸು ಅವಸರ ನೋಡಿದೆ 12
ಕರ್ಪೂರದಾರತಿ ವಪ್ಪಿನಿಂದಲಿ ತಂದು
ತಪ್ಪದಲಿ ಬೆಳಗೋದು ನೋಡಿದೆ
ರೆಪ್ಪೆಯವಿ ಹಾಕದೆ ಮನದಣಿಯ ತಿ
ಮ್ಮಪ್ಪನ ವಿಗ್ರಹ ನೋಡಿದೆ 13
ಹಿಮಋತು ಪ್ರಥಮ ಮಾಸÀ ದಶಮಿ
ಹಿಮಕರ ವಾರದದಿನದಲ್ಲಿ
ಕ್ರಮದಿಂದಲಿ ಪೋಗಿ ಬಿಂಬ ಮೂರುತಿಯ
ವಿಮಲ ಚಾರಿತ್ರವ ನೋಡಿದೆ 14
ಶತ ಅಪರಾಧವ ಮಾಡಲು ಕಳೆದು
ಪತಿ ವಿಜಯವಿಠ್ಠಲ ಪುರಂದರನ ಸಂ
ಗತಿಯಲ್ಲಿ ಸತತ ಸಾಕಿದಾ15
**********