.. by ಗುರುಪ್ರಾಣೇಶ ವಿಠಲ
ಯಾಯಾ ವರವ ನೀಡಿ ಶ್ರೀ |ಮಾಯಾ ರಮಣನ ಭಕುತರಿಗೆ ಪ
ಅರುಣೋದಯ ಕಾಲದಲೆದ್ದು ಶ್ರೀ |ಹರಿಸ್ಮರಣೆ ಮಾಡುತಲಿದ್ದು ||ಕರಚರಣಾದ್ಯವಯವ ಶುದ್ಧಿ |ವಿರಚಿಸಿ ನಿರ್ಮಲ ಮನವಿ 1
ಆದ್ಯಂತ ಗುರುವಾದ |ಮಧ್ವರಾಯರ ಮತವಪೊದ್ದಿದ ಭಗವದ್ದಾಸರು ಬಂದರೆಇದ್ದಿಲ್ಲವು ಎಂದೆನ ಬ್ಯಾಡಿ2
ಘನ ಮಹಿಮ ನಾರಾಯಣನು ಇವ |ರನು ಕರತಂದಿಹನೆಂದರಿದೂ ||ಮನದಲಿ ಯೋಚಿಸಿ |ಸನುಮಾನವನು ಪಡುತಲಿ 3
ಯಾಚನೆ ಮಾಡುವರೆಲ್ಲಾ ಬಲು |ನಾಚಿಕೆ ಉಳ್ಳವರೆಂದು ||ಖೇಚರ ವಾಹನ ಪ್ರಿಯರು ಶು- |ದ್ಧಾಚರಣೆಯವರೆಂದು 4
ನರರಂತೆ ಇವರಲ್ಲಗುರು ಪ್ರಾಣೇಶ ವಿಠಲನಂಘ್ರಿ ||ಸರಸೀಜ ಧೇನಿಸುತ ಯಮ್ಮರ ಸುತ ಬಂದಿಹರೆಂದೂ 5
****