Showing posts with label ಲಕ್ಷ್ಮಿದೇವಿಯೆ ಬಾರೆ ಮನೆಗೆ ಲಕ್ಷಿಯಿಟ್ಟು madhwesha krishna LAKSMIDEVIYE BAARE MANEGE LAKSHIYITTU. Show all posts
Showing posts with label ಲಕ್ಷ್ಮಿದೇವಿಯೆ ಬಾರೆ ಮನೆಗೆ ಲಕ್ಷಿಯಿಟ್ಟು madhwesha krishna LAKSMIDEVIYE BAARE MANEGE LAKSHIYITTU. Show all posts

Thursday, 2 December 2021

ಲಕ್ಷ್ಮಿದೇವಿಯೆ ಬಾರೆ ಮನೆಗೆ ಲಕ್ಷಿಯಿಟ್ಟು ankita madhwesha krishna LAKSMIDEVIYE BAARE MANEGE LAKSHIYITTU

ಲಕ್ಷ್ಮಿದೇವಿಯೆ ಬಾರೆ ಮನೆಗೆ
ಲಕ್ಷಿಯಿಟ್ಟು ನೋಡಿ ಹರಸೆ ನಮಗೆ||ಪಲ್ಲ||

ಅರಸು ಧರ್ಮರಾಯನರಸಿ ದ್ರೌಪತೀಗೆ
ಭರದಿ ಸೀರೆ ಅಕ್ಷಯ ಮಾಡಿದವನ ಮಡದಿ
ಕರಿಯ ಮೊರೆಯ ಕೇಳಿ   ತ್ವರದಿ ಓಡಿಬಂದ
ಹರಿಯ ರಾಣಿ ಲಕ್ಷ್ಮಿ ದೇವಿ ಬಾರೆ ಮನೆಗೆ||೧||

ಮಿಂದು ಮಡಿಯನುಟ್ಟು ಬಂದ ಪರಿವಾರವು
ಮಂದಗಮನೆ ನಮ್ಮ ಸದನಕ್ಕೆ ಬಾರೆಂದು
ಒಂದೇ ಮನಸಿನಿಂದ ಬಂದು ಕರೆಯುವೋರೆ
ಸಂದೇಹವಿಲ್ಲದೆ ಬೇಡುವೋರೆ ಬಂದು||೨||

ಹದಿನಾರು ಸಾವಿರ ಚದುರೆಯರ ಅರಸ
 ಪದುಮನಾಭನ  ರಾಣಿ ಪಾಲಿಸೆಂದೆನುತ
ಒದಗಿ ಬಂದಾಪತ್ತು ಗಳನೆ ಕಳಿ ಎಂದೆನುತ
ಮಧ್ವೇಶಕೃಷ್ಣನ  ರಾಣಿ ಗೊಂದಿಸುತ್ತ||೩||
***