sushameendra teertha rayara mutt yati stutih
ಶ್ರೀ ಲಕುಮೀಶಾ೦ಕಿತ ಶ್ರೀ ಕುರುಡಿ ರಾಘವೇಂದ್ರಚಾರ್ಯರು....
ರಾಗ : ನಾಟ ತಾಳ : ರೂಪಕ
ಗುರು ಶ್ರೀ ಸುಶಮೀಂದ್ರರ -
ಚರಣ ಕಮಲ ಭಜಿಪ ।
ನರನೆ ಧರೆಯೊಳು ಧನ್ಯನೋ ।। ಪಲ್ಲವಿ ।।
ಸುಜಯೀಂದ್ರರ ಕರ -
ಸರಸೀಜ ಜಾತ ।
ಧರೆಯಲ್ಲಿ ಮೆರೆಯುವ
ಪರಮ ಸಾತ್ವಿಕರಾದ ।। ಅ. ಪ ।।
ರಾಜಾ ರಾಜಗೋಪಾಲಾಚಾರ್ಯ -
ಪದ್ಮಾಂಬೆಯಾರ ಜಾತ ।
ತೇಜ ಗುಣದಿ ರಾಜಿತಾ ।
ಮೋಜಿಲಿ ಶ್ರೀ ಸುಯಮೀಂದ್ರರ ಸೇವಿಸಿ ।।
ನೈಜ ಗುನಡಿ ಶ್ರೀ ಸುಜಯೀಂದ್ರರೊಲಿಸಿ ।
ರಾಜಿಲಿಂದ ಸಂನ್ಯಾಸ ವಹಿಸಿ ।
ಈ ಜಗದಲಿ ಮೆರೆದ ಸನ್ಮುನಿ ।। ಚರಣ ।।
ಇಷ್ಟ ಪ್ರದರಾದಂಥ ಶ್ರೇಷ್ಠ
ಶ್ರೀ ರಾಘವೇಂದ್ರರ ।
ಅಷ್ಟಾಕ್ಷರ ಮಂತ್ರ ಜಪಿಸಿ ।
ನಿಷ್ಠೆಯಲಿ ಮೂಲರಾಮನಂಘ್ರಿಯ ।।
ಪಟ್ಟು ಸಂತತ ಸತತ ಪೂಜಿಸಿ ।
ಕಷ್ಟ ಸುಜನಕೆ ಬಿಡದೆ ಓಡಿಸಿ ।
ಶಿಷ್ಟ ಕವಿಗಳ ಸಂತತ ರಕ್ಷಿಪ ।। ಚರಣ ।।
ದಾನದಲಿ ಕರ್ಣರೆನಿಸಿ
ಜ್ಞಾನಿ ಸುರಧೇನೆನಿಸಿ ।
ಮೌನೀ ಜನರಲಿ ರಾಜಿಸೀ ।
ಜಾನಕೀಶ ಲಕುಮೀಶನಂಘ್ರಿಯ ।।
ಧ್ಯಾನದಿಂದ ಅನೇಕ ಸ್ಥಳದಲೀ ।
ಮಾನಿತರಾಗಿ ತುಲಾಭಾರಗೊಂಡು ।
ತಾಣ ಮಂತ್ರಾಲಯದಿ ನೆಲಸಿಹ ।। ಚರಣ ।।
****