Showing posts with label ಆನಂದ ಜ್ಞಾನಮಯ ಅಮಿತ ವಿಕ್ರಮ ಕಲ್ಕಿ prasannashreenivasa kalki avatara. Show all posts
Showing posts with label ಆನಂದ ಜ್ಞಾನಮಯ ಅಮಿತ ವಿಕ್ರಮ ಕಲ್ಕಿ prasannashreenivasa kalki avatara. Show all posts

Thursday, 5 August 2021

ಆನಂದ ಜ್ಞಾನಮಯ ಅಮಿತ ವಿಕ್ರಮ ಕಲ್ಕಿ ankita prasannashreenivasa kalki avatara

 ..

kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು

ಪ್ರಸನ್ನ ಶ್ರೀ ಕಲ್ಕಿ


ಆನಂದ ಜ್ಞಾನಮಯ ಅಮಿತ ವಿಕ್ರಮ ಕಲ್ಕಿ

ಅನಘ ಲಕ್ಷ್ಮೀರಮಣ ಶರಣು ಮಾಂ ಪಾಹಿ

ಕೃಷ್ಣ ನರಹರಿ ಕಪಿಲ ತಿಲಕ ವೇಂಕಟರಮಣ

ಪ್ರಾಣ ಹೃದ್‍ವನಜಸ್ಥ ರಕ್ಷಮಾಂ ಸತತ ಪ


ಶ್ರೀ ದುರ್ಗಾಭೂರಮಣ ವಿಷ್ಣು ರುದ್ರ ಬ್ರಹ್ಮ

ಐದು ರೂಪನೆ ಲಕ್ಷ್ಮೀ ಮಾಯಾ ಜಯಾ ಕೃತಿ

ಶಾಂತೀಶ ಹಯವದನ ಹಂಸ ಮಹಿದಾಸನೆ

ಶ್ವೇತವರಾಹ ಚಿನ್ಮಯ ಮೀನ ಕೂರ್ಮ 1

ಧನ್ವಂತರಿ ಶರಣು ಅಜಿತ ಸ್ತ್ರೀರೂಪನೇ

ಘನಭೂಮಿಧರ ನಾರಸಿಂಹ ವಾಮನ ತ್ರಿಪದ

ರೇಣುಕಾತ್ಮಜರಾಮ ವೇಣುಗೋಪಾಲ ನಮೋ

ಜ್ಞಾನದಾಯಕ ಬುದ್ಧ ಸುಜನಪ್ರಿಯ ಕಲ್ಕಿ 2


ವೃಷಭ ತಾಪಸ ಯಜ್ಞ ದತ್ತ ವಡವಾವಕ್ತರ

ಕೃಷ್ಣ ಹರಿನಾರಾಯಣ ವೇದವ್ಯಾಸ

ದೋಷದೂರನೆ ಶಿಂಶುಮಾರ ಸುಗುಣಾರ್ಣವನೆ

ಶ್ರೀಶ ಸರ್ವಾಶ್ರಯ ಅನಂತ ಸುಖರೂಪ 3

ಭೂಲೋಕದಲಿ ಮಣಿಮಂತಾದಿ ಅಸುರರು

ಶೀಲ ಹರಿಭಕ್ತರನ ಕಂಡು ಸಹಿಸದಲೆ

ಬಾಲ ಶಶಿಶೇಖರನ ಸ್ತುತಿಸಿ ವರಗಳ ಪಡೆದು

ಇಳೆಯಲಿ ಜನಿಸಿದರು ತತ್ವಜÁ್ಞನಿಗಳ ವೋಲ್ 4

ಬಾದರಾಯಣ ಸೂತ್ರ ವಿರುದ್ಧ ಭಾಷ್ಯಗಳ್ ಮಾಡಿ

ವೇದೋಪನಿಷದ್‍ಗಳಿಗೆ ಅಪ ಅರ್ಥ ಪೇಳಿ

ಸಾಧುಗಳ ಮನಕೆಡಿಸೆ ಮಧ್ವಾಖ್ಯ ಸೂರ್ಯನು

ಉದಿಸಿ ಸಜ್ಜನರ ಹೃತ್ತಿಮಿರ ಕಳೆಯೆ 5

ಶ್ರೀಪತಿ ವಿಷಯಕ ಜ್ಞಾನ ಮರೆ ಮಾಡುವ

ಇಪ್ಪತ್ತು ಮೇಲೊಂದು ಅಪದ್ದ ದುರ್ಭಾಷ್ಯ

ಅಪವಿತ್ರ ಅಚರಣೆ ದುಸ್ತರ್ಕ ದುರ್ವಾದ

ಈ ಪರಿಸ್ಥಿತಿಯ ನೆಟ್ಟಗೆ ಮಾಡಿದಾ ಮಾಧ್ವ 6

ಇಪ್ಪತ್ತಿ(ತ್ತು) ಎರಡನೇ ಭಾಷ್ಯಾ ಸಿದ್ಧಾಂತವ

ಉಪನಿಷದ್ ದಶಕಕೆ ಸರಿಯಾದ ಭಾಷ್ಯಗಳ

ಸಪ್ತ ತ್ರಿಂಶತ್ ಒಟ್ಟುಗ್ರಂಥ ಸುರಧೇನುವ

ಅಪವರ್ಗಾನಂದ ಒದಗಿಸಿದ ಯೋಗ್ಯರಿಗೆ 7

ಸದ್ಧರ್ಮ ಆಚರಣೆ ಯೋಗ್ಯ ಉಪಾಸನಾ

ಭಕ್ತಿ ಸವೈರಾಗ್ಯ ಜ್ಞಾನ ಉನ್ನಾಹ

ಅಧಿಕಾರಿಗಳು ಈ ಪರಿಯಲಿ ಸುಖಿಸಲು

ಕ್ಷಿತಿಯ ಜನರಿಗೆ ಲಭಿಸಿತು ಕ್ಷೇಮ 8

ಕಾಲವು ಜರುಗಿತು ದೈತ್ಯರು ನೋಡಿದರು

ಮೆಲ್ಲಮೆಲ್ಲನೆ ಪುನಃ ವಿಷಮ ಮಾಡಿದರು

ಶೀಲರ ಹಿಂಸಿಸಿ ಸದ್ಧರ್ಮ ಕೆಡಿಸಿದರು

ಖಳರು ಕ್ರೌರ್ಯವ ವರ್ಧಿಸಿದರು ದಿನ ದಿನದಿ 9

ಮಹಾಭಯಂಕರ ದೈತ್ಯ ಸಮೂಹವ

ಸಂಹನನ ಮಾಡಿದಳು ಮಹಾದುರ್ಗಾದೇವಿ

ಬ್ರಾಹ್ಮಣಕುಲದಲಿ ಪ್ರಾದುರ್ಭವಿಸಿದ ದೇವಿ

ಮಹಾದುರ್ಗಾ ಜಗದಾಂಬಾ ಶರಣು ಮಾಂಪಾಹಿ 10

ದಿನಗಳು ಪಕ್ಷಗಳು ಮಾಸ ಋತು ವರುಷಗಳು

ನಿನ್ನ ನಿಯಮನದಿಂದ ಕಾಲ ಪ್ರವಹಿಸಿತು

ಜನಗಳು ಕಲಿಯುಗದ ಕಡೇ ಭಾಗ ಬರಲಾಗ

ಹೀನ ಕರ್ಮಂಗಳಲಿ ಆಸಕ್ತರಾದರು 11

ಪುರಾಣಂಗಳಲಿ ಕಲಿಯಗದ ಸ್ಥಿತಿಗತಿಯು

ವಿವರಿಸಿದಂತೆಯೇ ನೆನೆಯಲೂ ಭೀತಿ -

ಕರ ಪಾಪಕರ್ಮದಲಿ ಜನರು ರತರಾಗಿರಲು

ನರಪರ ಕ್ರೂರತನ ದಿನ ದಿನ ಹೆಚ್ಚಿತು 12

ಜÁ್ಞನಾದಿ ಸಂಪತ್ತು ಕಳಕೊಂಡ ಜನರು

ವಿಷ್ಣು ದ್ವೇಷಿಗಳಾಗಿ ಬಹು ಬಹು ನೀಚ-

ತನದಲಿ ಇರುತಿರಲು ದೇವತಾವೃಂದವು

ನಿನ್ನ ಬೇಡಿದರು ಪುನಃ ಧರ್ಮಸ್ಥಾಪಿಸಲು 13

ಯದಾಯದಾಹಿ ಸದ್ಧರ್ಮಕ್ಕೆ ಹಾನಿಯು

ಅಧರ್ಮಕ್ಕೆ ವೃದ್ಧಿಯು ಆಗುವದೋ ಆಗಾಗ

ಸಾಧುಗಳ ರಕ್ಷಣೆಗೆ ಪಾಪಿಗಳ ಹನನಕ್ಕೆ

ಸದ್ಧರ್ಮ ಸ್ಥಾಪನೆಗೆ ಅವತಾರ ಮಾಳ್ಪಿ 14

ಭೂಮಿಯಲಿ ಸುಪವಿತ್ರ ಶಂಭಳ ಗ್ರಾಮದಲಿ

ಬ್ರಾಹ್ಮಣ ಮಹಾತ್ಮ ವಿಷ್ಣು ಯಶಸ್ ಭವನದಲಿ

ಅಮಿತ ಪೌರುಷಜ್ಞಾನ ಆನಂದಮಯ ನೀನು

ವಿಮಲ ಕಲ್ಕ್ಯವತಾರ ಮಾಡಿದಿ ಮಹೋಜ 15

ಕಲ ಎಂದರೆ ಜ್ಞಾನ ಕ ಎಂದರಾನಂದ

ಕಲ್ಕೆಂದರೆ ಜ್ಞಾನ ಆನಂದ ರೂಪ

ಶೂಲಿ ವಜ್ರಿಗಳಿಗೆ ಸುಖಜ್ಞಾನ ಬಲ ಕೊಡುವ

ಠಲಕನಮೋ ಪಾಪಹರ ಸೌಭಾಗ್ಯದಾತ 16

ಲೋಕವಿಲಕ್ಷಣ ಸುಪ್ರಭಾಶ್ವ ಏರಿ

ನಿಖಿಳ ದುರ್ಮತಿ ಭೂಪಾಲ ಚೋರರನ್ನ

ಅಖಿಳ ಪಾಪಿಗಳ ಅಧರ್ಮ ಆಚರಿಸುವರ

ಶ್ರೀಕಾಂತದ್ವೇಷಿಗಳ ಕತ್ತರಿಸಿ ಕೊಂದಿ 17

ಸತ್ಯವ್ರತ ಸುರವೃಂದ ವಸುಮತಿ ಪ್ರಹ್ಲಾದ

ಶತಮಖ ಪ್ರಜೆಗಳು ವಿಭೀಷಣ ಸುಗ್ರೀವ

ಪಾರ್ಥಸುಧಾಮ ರಕ್ಷಕನೇ ಸುರಬೋಧಕನೇ

ಸತ್ಯಧರ್ಮರ ಕಾಯ್ವ ಕರುಣಾಳು ಕಲ್ಕಿ 18

ಜ್ಞಾನಸುಖ ಭೂಮದಿ ಗುಣಪೂರ್ಣ ನಿರ್ದೋಷ

ವಿಷ್ಣು ಪರಮಾತ್ಮ ಹರಿ ಉದ್ದಾಮ ಬ್ರಹ್ಮ

ಪೂರ್ಣಪ್ರಜÁ್ಞರ ಹೃಸ್ಥ ವನಜಭವಪಿತ ಕಲ್ಕಿ

ಪ್ರಸನ್ನ ಶ್ರೀನಿವಾಸ ಶರಣು ಮಾಂಪಾಹಿ 19

-ಇತಿ ಕಲ್ಕ್ಯಾವತಾರ ಸಂಪೂರ್ಣಂ -

***