Showing posts with label ರಾಮ ಸ್ಮರಣೆಯಿಂದ ಸಕಲ ಪಾಪಹರ prasannavenkata. Show all posts
Showing posts with label ರಾಮ ಸ್ಮರಣೆಯಿಂದ ಸಕಲ ಪಾಪಹರ prasannavenkata. Show all posts

Saturday, 16 November 2019

ರಾಮ ಸ್ಮರಣೆಯಿಂದ ಸಕಲ ಪಾಪಹರ ankita prasannavenkata

by ಪ್ರಸನ್ನವೆಂಕಟದಾಸರು
ರಾಮಸ್ಮರಣೆಯಿಂದ ಸಕಲ ಪಾಪಹರ ರಾಮ ರಾಮ ಎನ್ನಿರೊವ್ಯೊಮಕೇಶನ ದಿವ್ಯತಾರಕ ಮಂತ್ರವು ಪ.

ಶತಕೋಟಿ ರಾಮಾಯಣದ ಬೀಜಾಕ್ಷರ ರಾಮ ರಾಮ ಎನ್ನಿರೊಕ್ಷಿತಿಜೆಯ ಪ್ರಾಣದ್ವಲ್ಲಭ ಶ್ರೀದಶರಥರಾಮ ರಾಮ ಎನ್ನಿರೊ 1

ಪಾಮರರೆಲ್ಲರು ಪಂಡಿತರಾದರು ರಾಮ ರಾಮ ಎನ್ನಿರೊಆ ಮೋಕ್ಷ ಕರತಳವಾಹುದು ಕೊಂಡಾಡೆ ರಾಮ ರಾಮ ಎನ್ನಿರೊ 2

ಮಖಕೋಟಿಗಧಿಕ ಮಹಾಪುಣ್ಯದಾಯಕ ರಾಮ ರಾಮ ಎನ್ನಿರೊಮುಕ್ತಾಮುಕ್ತಾರ್ಚಿತ ಕರುಣವಾರಿನಿಧಿ ರಾಮ ರಾಮ ಎನ್ನಿರೊ 3

ಭಕ್ತವತ್ಸಲ ಭಾಗ್ಯಭೂಷಿತಭವಹರರಾಮ ರಾಮ ಎನ್ನಿರೊನಿಖಿಲ ಭುವನಪತಿ ಬ್ರಹ್ಮಾದಿಸುರವಂದ್ಯ ರಾಮ ರಾಮ ಎನ್ನಿರೊ 4

ಅಂಜನೆಜಾತಪೂಜಿತ ಪಾದವಾರಿಜ ರಾಮ ರಾಮ ಎನ್ನಿರೊಕಂಜನೇತ್ರಕಂಜಸಖಅನಂತಪ್ರಭ ರಾಮ ರಾಮ ಎನ್ನಿರೊ5

ದಶಶಿರಮರ್ದನ ವಿಭೀಷಣ ವರಪ್ರದ ರಾಮ ರಾಮ ಎನ್ನಿರೊಸುಶರಧಿ ಬಂಧನ ಸುಗ್ರೀವ ಸಂಸೇವ್ಯ ರಾಮ ರಾಮ ಎನ್ನಿರೊ 6

ಲಕ್ಷ್ಮಣ ಭರತ ಶತ್ರುಘ್ನಾರಾಧಿತ ರಾಮ ರಾಮ ಎನ್ನಿರೊಋಕ್ಷವರಪ್ರದ ರಘುಕುಲಾಂಬುಧಿಚಂದ್ರ ರಾಮ ರಾಮ ಎನ್ನಿರೊ 7

ಜ್ಞಾನಾನಂದ ಬಲಾತ್ಮ ಪರಬ್ರಹ್ಮ ರಾಮ ರಾಮ ಎನ್ನಿರೊಮೌನಿನಿಕರಧ್ಯೇಯಪುಣ್ಯಪುರುಷಗೇಹ ರಾಮ ರಾಮ ಎನ್ನಿರೊ8

ಪ್ರಸನ್ನಮೂರುತಿ ಪ್ರಸನ್ನಾನನ ಪರಮಾತ್ಮ ರಾಮ ರಾಮ ಎನ್ನಿರೊಪ್ರಸನ್ನನಿಲಯ ನಿತ್ಯಪ್ರಸನ್ನವೆಂಕಟ ರಾಮ ರಾಮ ರಾಮ ಎನ್ನಿರೊ 9
**********