Showing posts with label ಗುರುರಾಯರ ನಂಬಿರೋ purandara vittala madhwacharya stutih. Show all posts
Showing posts with label ಗುರುರಾಯರ ನಂಬಿರೋ purandara vittala madhwacharya stutih. Show all posts

Friday, 27 December 2019

ಗುರುರಾಯರ ನಂಬಿರೋ purandara vittala madhwacharya stutih

ಗುರುರಾಯರ ನಂಬಿರೋ ಮಾರುತಿಯೆಂಬ ಗುರುರಾಯರ ನಂಬಿರೋ | ಪ |

ಗುರುರಾಯರ ನಂಬಿ ಬಿಡದೆ ಯಾವಾಗಲೂ
ದುರಿತವ ಕಳೆದು ಸದ್ಗತಿಯ ಪಡೆವರೆಲ್ಲ | ಅ ಪ |

ವನಧಿಯ ಮನೋವೇಗದಿ ಲಂಘಿಸಿ ಮಹೀ
ತನುಜೆ ಶೋಕವ ತರಿದು
ವನವ ಬೇರೊಡನೆ ಕಿತ್ತೀಡಾಡಿ ಇದಿರಾದ
ದನುಜರ ಬಡೆದು ಲಂಕೆಯ ತನ್ನ ಸಖಗಿತ್ತ | ೧ |

ಕೌರವ,ಬಕ , ಹಿಡಿಂಬ ಕೀಚಕರೆಂಬ
ದುರಳ ಸಂತತಿ ನೆಗ್ಗೊತ್ತಿ
ಘೋರ ಪಾತಕಿ ದುಶ್ಯಾಸನನ ರಕುತವ
ಹೀರಿ ಮುದದಿ ಮುರವೈರಿಯ ಭಜಿಸಿದ | ೨ |

ಜೀವೇಶ ಒಂದೇ ಎಂಬ
ದುರ್ವಾದಿಯ ಭಾವಶಾಸ್ತ್ರವ ಮುರಿದು
ಕೋವಿದರಿಗೆ ಸದ್ಭಾಷ್ಯವ ತೋರಿದ
ದೇವ ಪುರಂದರ ವಿಠಲ ಸೇವಕರಾದ | ೩ |
*******

ಪುರಂದರದಾಸರು
ಗುರುರಾಯರ ನಂಬಿರೋ ಮಾರುತಿಯೆಂಬ ಪ

ಗುರುರಾಯರ ನಂಬಿ ಬಿಡದೆ ಯಾವಾಗಲು |ದುರಿತವ ಕಳೆದು ಸದ್ಗತಿಯ ಪಡೆವರೆಲ್ಲ ಅ.ಪ

ವನಧಿಯ ಮನೋವೇಗದಿಂದ ಲಂಘಿಸಿ ಮಹಿ-ತನುಜೆಯ ಶೋಕತಾಪವ ಕಳೆದು ||ವನವ ಬೇರೊಡನೆ ಕಿತ್ತೀಡಾಡಿ ಎದುರಾದದನುಜರ ಸದೆದು ಲಂಕೆಯ ತನ್ನ ಸಖಗಿತ್ತ 1

ಕೌರವ ಬಕ ಹಿಡಿಂಬಕ ಕೀಚಕರೆಂಬ |ಕ್ರೊರಸಂತತಿಯೆಲ್ಲ ನುಗ್ಗಲೊತ್ತಿ ||ಘೋರಪಾತಕಿದುಶ್ಯಾಸನ ರಕುತವಹೀರಿ ಮುದದಿ ಮುರವೈರಿಯ ಭಜಿಸಿದ 2

ಜೀವೇಶರೊಂದೆಂಬ ದುರ್ವಾದಿಗಳ ಕು-ಭಾವಶಾಸ್ರ್ತಗಳೆಲ್ಲ ತರಿದೋಡಿಸಿ ||ಕೋವಿದರಿಗೆ ಸದ್ಛಾಷ್ಯ ಸುಧೆಯನಿತ್ತುದೇವ ಪುರಂದರವಿಠಲ ಸೇವಕನಾದ 3

**********