Showing posts with label ಗುರುರಾಜ ರಘೂತ್ತಮ ಗುರುರಾಜ prasannashreenivasa. Show all posts
Showing posts with label ಗುರುರಾಜ ರಘೂತ್ತಮ ಗುರುರಾಜ prasannashreenivasa. Show all posts

Friday, 27 December 2019

ಗುರುರಾಜ ರಘೂತ್ತಮ ಗುರುರಾಜ ankita prasannashreenivasa

ಗುರುರಾಜ ರಘೂತ್ತಮ ಗುರುರಾಜ
ಗುರುರಾಜ ನಮೋ ನಮೋ ನಿನ್ನ ಪಾದ
ಸರಸಿಜಯುಗಳದಿ ನಾ ಶರಣು ಅಹ
ಧರಣಿಜಾಪತಿ ರಾಮ ಭದ್ರಗೆ ಪ್ರಿಯ ನೀನು
ಕರುಣದಿ ಸಲಹೆನ್ನ ದುರಿತಗಳಳಿದು ||ಪ||

ನಿವ್ರ್ಯಾಜ ಕರುಣಿ ರಘುವರ್ಯ ಗುರು
ವರ್ಯ ಸುಮೇಧರ ದಿವ್ಯ ಚಾರು
ತೋಯಜ ಕರದಿಂದ ಉದಯನಾಗಿ
ನಿಗಮ ಸಾಮ್ರಾಜ್ಯ ಅಹ
ಮಾಯೇಶ ಕಾಳೀಶ ಗುರುಗಳ ಪ್ರಿಯ ಬಾಲ
ವಯಸ್ಸಲ್ಲೇ ಉದ್ದಾಮ ಪಂಡಿತನಾದಿಯೋ ||1||

ಬದರೀಶ ನಿರ್ಣೀತತತ್ವ ಅರ್ಥ
ವಿಸ್ತಾರ ಮಾಡಿದ ಮಧ್ವ ಟೀಕೆ
ಜಯತೀರ್ಥ ಬರೆದ ತದ್ಭಾವ ಪೇಳಿ
ಒದಗಿಸಿದೆಯೊ ಸುಖವ ಅಹ
ಮುದ ಸೌಭಾಗ್ಯ ಸಾಧು ವೈಷ್ಣವತನ
ಇತ್ತು ಪಾಲಿಪುದೆನ್ನ ಕುಂದುಗಳೆಣಿಸದೆ ||2||

ಧರೆಯಲ್ಲಿ ದಕ್ಷಿಣಕಾಶಿ ಸ್ವರ್ಗ
ಧರೆಯಳದವನ ಸೇವಿಸಿ ಗಂಗಾ
ಧರಷಡಾನನ ಇಲ್ಲಿ ವಾಸಿಸುವ ಈ
ಕ್ಷೇತ್ರ ವೃಂದಾವನ ವಾಸಿ ಅಹ
ಪರಮೇಶ ಕೇಶವ ಪ್ರಿಯಾ ಪಿನಾಕಿನಿಯಿಂದ್ರಾ
ತೀರ ಮಧ್ಯದಿ ತಪಗೈದು ಭಕ್ತರ ಕಾಯ್ವಿ ||3||

ಸುರವೃಂದ ಶ್ರೇಷ್ಠ ನೀನಹುದು ಎನ್ನ
ಪರಿ ಬಾಧೆಯ ತರಿದು ಸರ್ವ
ಸಿರಿ ಇತ್ತು ಹರಿ
ಗುರು ಭಕ್ತಿ ಬೆಳೆಸಿ ಪಾಲಿಪುದು ಅಹ
ಹರ ಸಮೀಪಕೆ ಒಳ್ಳೆ ಸಾಧನ ಸರ್ವದಾ
ಕಾರುಣ್ಯದಲಿ ಎನ್ನೊಳ್ ನಿಂತು ಮಾಡಿಸೋ ಗುರೋ ||4||

ರಾಮನೃಕೇಸರಿ ವ್ಯಾಸ ಸತ್ಯ
ಭಾಮ ರುಕ್ಮೀಣಿ ದೇವಿ ಅರಸ ಭೂಮ
ಶ್ರೀಮಂತ ಕ್ಷೀರಾಬ್ಧಿವಾಸ ಮಧ್ವ
ಭೀಮಹನುಮ ವಂದ್ಯ ಶ್ರೀಶ ಅಹ
ಹೇಮಗರ್ಭನ ತಾತ `ಪ್ರಸನ್ನ ಶ್ರೀನಿವಾಸ’
ರಮೆಯರಸನ ಪ್ರಿಯತಮ ಜೀಯ ||5||
*******