Showing posts with label ಜಯ ಜಯ ಸದಮಲ ಗುಣಭರಿತಜಯ prasannavenkata. Show all posts
Showing posts with label ಜಯ ಜಯ ಸದಮಲ ಗುಣಭರಿತಜಯ prasannavenkata. Show all posts

Monday, 11 November 2019

ಜಯ ಜಯ ಸದಮಲ ಗುಣಭರಿತಜಯ ankita prasannavenkata

by ಪ್ರಸನ್ನವೆಂಕಟದಾಸರು
ಜಯ ಜಯ ಸದಮಲ ಗುಣಭರಿತಜಯ ಜಯ ಹನುಮಂತ ಭಾರತೀಕಾಂತ ಪ.

ಮುನ್ನೆ ದಾಶರಥಿಯ ಚರಣವಿಡಿದೆ ನೀಉನ್ನತವಾದ ವರಕೃಪೆಯ ಪಡೆದೆಉನ್ಮತ್ತರಕ್ಕಸರೆದೆ ತಲೆಗಡಿದೆ ನೀಚೆನ್ನಾಗಿ ಪ್ಲವಗರ ಪ್ರಾಣವ ಪಡೆದೆ 1

ದ್ವಾಪರದೊಳಗೆ ಬಲಭೀಮನಾದೆಸಿರಿಗೋಪಾಲರಾಯನ ನಿಜದಾಸನಾದೆಕಾಪುರುಷ ಕೀಚಕನ ಸದೆದೆ ಬಲುಪಾಪಿ ಕೌರವಾನುಜನೊಡಲ ಬಗೆದೆ 2

ಹರಿಸರ್ವೋತ್ತಮ ಜೀವರೊಳು ಭೇದವೆಂದರಿವವರೊಳು ನೀ ಪೂರಣಬೋಧಸಿರಿಪ್ರಸನ್ನವೆಂಕಟೇಶನಪಾದನೀಸ್ಮರಣೆ ಕೊಡೆಲೆ ವೈಷ್ಣವವರದ 3
********