ಎನ್ನ ಪಾಲಿಸೋ ಕರುಣಾಕರ ।
ಪನ್ನಗಶಯನ ಗದಾಧರ ॥
ದೇವಕಿನಂದನ ಹರಿಮಧುಸೂದನ ।
ಅಸುರಾಂತಕ ಮುರಳೀಧರ ।
ಬಿಸರುಹನಾಭ ಸರ್ವೇಶನೆ ಮುನಿ-
-ಮಾನಸಸಂಚಾರ ಮಾಧವ ॥೧॥
ಪರಮಪುರುಷ ಉರಗಾಶನವಾಹನ ।
ಕರುಣಾರ್ಣವ ವಡವಾನಲ ।
ಸರಸಿಜೋದ್ಭವ ಗಿರಿಜಾವಲ್ಲಭನುತ ।
ವರಸುಜನಾವಳಿಪಾಲನ ॥೨॥
ಕಾವನಪಿತ ಮುಚಕುಂದವರದ ರಾ-
-ಜೀವನಯನ ನಾರಯಣ ।
ಶ್ರೀವತ್ಸಲಾಂಛನ ಗುರುಮಹೀಪತಿ ।
ಜೀವನಸಖ ಶ್ರೀಕೃಷ್ಣನ ॥೩॥
****