Showing posts with label ಇಂದಿರೆಯರಸನಾಡಿದ ಆಟ ನೋಡಿ ನಲಿದಾಡಿ ಬಂದ gurumahipati. Show all posts
Showing posts with label ಇಂದಿರೆಯರಸನಾಡಿದ ಆಟ ನೋಡಿ ನಲಿದಾಡಿ ಬಂದ gurumahipati. Show all posts

Wednesday 1 September 2021

ಇಂದಿರೆಯರಸನಾಡಿದ ಆಟ ನೋಡಿ ನಲಿದಾಡಿ ಬಂದ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಇಂದಿರೆಯರಸನಾಡಿದ ಆಟನೋಡಿ|ನಲಿದಾಡಿ| ಬಂದರಜಮುಖ್ಯರೋಡಿ|ಬಹುಜನ ಕೂಡಿ ಪ 
ಅರುಣ ತಳದಿರಂಜಿಪ ದ್ವಯ|ಚರಣದಿಂದ ಕಾಳಿ ಅಹಿ| ವರನಸಿರವ ಮೆಟ್ಟಿಸೂರ್ಯ|ಕಿರಣದಂತೆ ಪೊಳೆವಾ| ಸ್ಪುರಣಗೆಜ್ಜಯ ಝಣ ಝಣ|ಝಣಕು ಝಣಕೆಂಬ ತೆರದಿಂದ| ಕರುಣ ಧಿಗಿ ಧಿಗಿಯೆಂದು|ವಾರುಣದಲಿ ಕುಣಿಯೇ 1 
ವೀಣೆಯಲಿತಾಸರಿಗ ಮಪಧನಿ|ಸೆಂಬಮೆಟ್ಟಿಕೆಯೊಳ| ತ್ರಾಣದಿಂದ ಝಿಂ ಝಿಂ ಝಿಂ ಝಿಂ ಕೆನಿಪ ದ್ವನಿಯಗಳನು| ಮಾಣುತಲಿ ಸಿರಿರಾಗ ಘನಮಲಾಹರ ಮೊದಲು| ವಾಣಿಪತಿಸುತ ಪಾಡಿದ ನಾನಾ ರಾಗದಲಿ 2 
ಅಂಬುಜಾಕ್ಷಪ್ರಿಯನಾದ|ಅಂಬುಜಭವ ಪದ ಕರ್ತ| ಕುಂಭಿಯೊಳಹಸ್ತಿನಿಕು|ರಂಬಾರಿ ಕೋಟಿ ದ್ವನಿ| ವೆಂಬಂತೆ ಕಹಳೆಗಳು|ತುಂಬಿ ಪೂರೈಸಿದನು| ಭುಂ ಭುಂ ಭುಂ ಭುಂ|ಭುಂ ಮೆಂದು ಗಂಭೀರ ಸಪರದಿ 3 
ತತ್ತಥೈಯ್ಯಾ ಥೈಯ್ಯಾ ಥರಿಕೆಂದು|ಧತ್ತೆರಿಕುಥಲಿ| ಒತ್ತಿ ಖಿಣಿ ಖಿಣಿ ಖಿಣಿಲೆಂಬ|ಮೊತ್ತತಾಳು ವಿಡಿದು| ಮತ್ತ ಏಕತಾಳ ಝಂಪೆ|ತಾಳ ಅಟ್ಟತಾಳಗಳು| ಉತ್ತುಮದಾ ಕರದಿ ಹರ ಅರ್ಥಿಯಲಿ ನಿಂದಾ 4 
ಇಂದೀವರಜ ಮದ್ಯಸ್ಥಲ ಒಂದು ನೆಗೆದು ಜವದಿಂದಾ| ದಂ ದಂ ದಂ ದಂ ದಮುಕೆಂದು|ಛಂದದಿ ಮುಟ್ಟಿದನು| ಧಿಂಧಿಂಧಿಂಧಿಂಧಿಮಿಕೆಂದು|ದುಂಧುಂಪೊಡದರು ಸುರರು| ತಂದೆ ಮಹಿಪತಿ ನಂದನ ವಂದ್ಯನೊಲುವಂತೆ 5
***