..
kruti: tandevaradagopala vittala (ಪ್ರಹ್ಲಾದಗೌಡರು)
ನಗುವರಲ್ಲೋ ಕೃಷ್ಣಾ ನಿನ್ಹಾಸಕೆ ನೋಡಿ ಪ
ಸುತನಾ ಸತಿಯರು ಸಹಿಸದೆ ವಿರಸವಾಗುತಿರೆಸುಮ್ಮನಿಪ್ಪುದು ನೋಡಿ ಅ.ಪ.
ಕಂದ ನಾನಲ್ಲವೇ ನಿನ್ನ ರಾಜಾ ಹಿಂದೆ ಮುಂದೆಬಲು ನಿಂದಿಪರೈ ಭೋಜಾಇಂದು ಮುಂದು ಎಂದೆಂದಿಗೂ ನಂಬಿದ ನರನಾಪಾಲಿಸದಿಪ್ಪುದು ಕಂಡು1
ಸಹಿಸಲಾರೆ ಸಹಿಸಲಾರೆ ಈ ತಾಪವ ಸಹಿಸಲಾರೆನೋಘನತಾಪಕೆ ಒಳಮಾಡಿ ಕ್ಲೇಶಪಡಿಸೋದಕೆ 2
ಆರು ಕಾಯ್ವರಿಲ್ಲೋ ಗುರುರಾಜ ನಿನ್ಹೊರತು ಪೇಳೋಪುರುಷ ಸೂಕ್ತನುತ ತಂದೆವರದಗೋಪಾಲವಿಠ್ಠಲನ ಪ್ರೀಯಾ
***