ಬಿಡೋ ಬಿಡು ಮನುಜ ಭ್ರಾಂತಿಯ ಪಡಕೊ ನಿನ್ನೊಳು ತಿಳಿಯುವ್ಹಾಂಗ ಸದ್ಗುರು ಭಕ್ತಿಯ ಪ
ಬುಡದಲಿ ಫಲವಿರಲಿಕ್ಕೆ ಅಡರುವದ್ಯಾಕೊ ತುದಿಗೆ ಪಡಬ್ಯಾಡೋ ನಾನಾ ಸಾಯಾಸ ತೊಡಕಿ ಬೀಳುವ 1
ಕಾಶಿಗೆ ಹೋಗಬೇಕೆಂದು ಕಾಸಿನ ಚಾಲವರಿಕ್ಯಾಕ ಆಸಿ ಅಳಿದರೊಂದೇ ಸಾಕು ಭಾಸುದು ತನ್ನೊಳಗೆ 2
ದೇವರೆ ತಾ ದೂರಿದ್ದರೆ ಆವದೊ ನಿನ್ನ ಕಾವ ದೈವ ಠಾವಿಕಿ ಮಾಡಿಕೊಳ್ಳೊ ಸಾವಧ ವಾಗಿ 3
ಹೇಳಿಕೊಡುವ ಸ್ವಾಮಿ ಬೆಳಗ ತಾ ಝಾಡಿ 4
ಸಾಯಾಸವಿಲ್ಲದೆ ಮಹಿಪತಿಗೆ ಶ್ರಯದೋರಿತು ಗುರುವಾಕ್ಯದಲಿ ಆಯಿತು ಮಾಡಿದ ಗುರು ತಾಯಿತಂದೆನಗೆ 5
***