ಕಾಮನ ಪಿತ ಕೃಷ್ಣ ಕಾಮಿನಿಯಾದನು
ಕಾಮನ ಪಿತ ಕೃಷ್ಣ ಕಾಮಿನಿ ಆಗುವೊ ಕಾರಣ ಕೇಳಿರಿ
ಕಾಮಿಸಿ ಶ್ರೀಹರಿ ಆ ಮಹಾಸುರರಿಗೆ ಸುಧೆಯನ್ಹಂಚುಣಿಸಲು
ಶ್ರೀ ಮಾಯಾಪತಿಯು ತಾ ಸ್ತ್ರೀಯಾದ ಚೆಲುವಿಕೆ ಪ
ರುಳಿ ಲುಲ್ಲು ಗೆಜ್ಜೆ ಪೈಜಣ ಪಾಗಡವನಿಟ್ಟು ಚರಣದಿ
ಕಾಲುಂಗರ ಪಿಲ್ಯ ಮೆಂಟಿಕೆ ಝಣ ಝಣ ನಾದ
ಕಾಳಿಯ ಫಣ ತುಳಿದಂಥ
ಖಳರ ಮರ್ದನ ದಿವ್ಯ ತರುಣಿ ತಾನಾದನು 1
ಸೆರಗು ನಿರಿಯು ಜರತಾರಿ ಪೀತಾಂಬರ
ಬಿಡಿ ಮುತ್ತಿನುಡಿಗಂಟೆ ನಡುವಿನ್ವೊಡ್ಯಾಣ
ಸಡಗರದಿಂದ್ವೊಪ್ಪೊ ತಾಳಿ ಪದಕವಿಟ್ಟು
ಮೃಡನ ಪ್ರಿಯನು ಮುದ್ದು ಮಡದಿ ತಾನಾದನು 2
ಕಂಚುಕ ತೋಳಿನಲ್ವಂಕಿ ಬÁಜುಬಂದು
ಮಿಂಚಿನಂದದಿ ನಲಿದಾಡುತ ಗೊಂಡ್ಯವು
ಕಂಕಣ ತೋಡ್ಯ ವಜ್ರದ್ವಾರ್ಯ ಹರಡಿಯು
ಪಂಚ ಬೆರಳಿನಲ್ಲುಂಗುರವನಿಟ್ಟು ಸೊಬಗಲಿ 3
ಚಿಂತಾಕು ಸರಿಗೆ ಚಿನ್ನದ ಗುಂಡು ಹವಳವು
ಕೆಂಪು ಏಕಾವಳಿ ಮಲಕು ತಾಯಿತ ಮುತ್ತು
ಮಿಂಚುವೋ ಪದಕ ಮುತ್ತಿನ ಕಟ್ಟಾಣಿಯು
ಪಂಚರತ್ನದ ಹಾರ ಪರಮಾತ್ಮಗಲೆಯುತ4
ಉಂಗುರ ಕೂದಲು ಶೃಂಗಾರ ಕ್ಯಾದಿಗೆ
ಚಂದ್ರ ಚೌರಿ ಜಡೆಬಂಗಾರ ರಾಗಟೆ
ಮುಂದೆ ಮುತ್ತಿನದಂಡೆ ಮುಡಿಯಲ್ಲೆ ಒಪ್ಪಿದ
ದುಂಡು ಮಲ್ಲಿಗೆ ದÉೂೀಷದೂರನಿಗಲೆವುತ 5
ಪಂಜಿನ ವಾಲೆ ಬುಗುಡಿ ಬಾಳ್ಯ ಚಳತುಂಬು
ಚಂದ್ರ ಮುರುವು ಚಿನ್ನದ ಕಡ್ಡಿ ಕಿವಿಯಲ್ಲಿ
ಕುಂದಣ ಕುಸುರು ವಜ್ರಗಳು ಕೆಂಪ್ಹೊಳೆವಂಥ
ದುಂಡು ಮುತ್ತಿನ ಮುಕುರ್ಯವ ಮೂಗಿನಲ್ಲಿಟ್ಟು 6
ಅಚ್ಚ ಮುತ್ತಿನ ದಂಡೆ ಕುಚ್ಚು ತೊಂಡಿಲುಗಳು
ಹಚ್ಚೆಯ ಬೊಟ್ಟು ಕಸ್ತೂರಿ ಕುಂಕುಮನಿಟ್ಟು
ಪಚ್ಚೆ ಮಾಣಿಕ್ಯದರಳೆಲೆ ಚಂದ್ರ ಸೂರ್ಯರು
ನಿತ್ಯ ತೃಪ್ತನು ನೀಲವರ್ಣದಂತ್ಹೊಳೆಯುತ 7
ಆ ಮಹಾವೈಕುಂಠಪುರದರಸಾದ ಈ ಮಹಾ ರಜತ-
ಪೀಠ ಪುರದಲಿ ಬಂದು ಪ್ರೇಮದಿ ನಿಂತು
ನೋಡುತ ಬಂದ ಜನರಿಗೆ
ಕಾಮಿತ ಫÀಲ ಮುಕ್ತಿ ಕೊಡುವ ಕಮಲಾಪತಿ 8
ಅಷ್ಟಯತಿಗಳಿಂದಲಿ ಪೂಜೆಯಗೊಂಬೊ
ಲಕ್ಷ್ಮಿಯ ಪತಿಯು ಸ್ತ್ರೀರೂಪವ ಧರಿಸಿರೆ
ದೃಷ್ಟಿಂದೆ ನೋಡದಿನ್ನಿರುವೋರೆ ಭೀಮೇಶ-
ಕೃಷ್ಣ ನಿನ್ನ ಮನದಲ್ಲಿಟ್ಟು ಸ್ತುತಿಸುವೆನು 9
****