Showing posts with label ಕೊಡು ಕಂಡ್ಯಾ ಹರಿಯೇ ಶ್ರೀಪತಿ ಉತ್ತಮರ vijaya vittala. Show all posts
Showing posts with label ಕೊಡು ಕಂಡ್ಯಾ ಹರಿಯೇ ಶ್ರೀಪತಿ ಉತ್ತಮರ vijaya vittala. Show all posts

Wednesday 16 October 2019

ಕೊಡು ಕಂಡ್ಯಾ ಹರಿಯೇ ಶ್ರೀಪತಿ ಉತ್ತಮರ ankita vijaya vittala

ಕೊಡು ಕಂಡ್ಯಾ ಹರಿಯೇ |
ಶ್ರೀಪತಿ ಉತ್ತಮರ ಸಂಗತಿಯಲೆನ್ನಯಿಟ್ಟು ಪ

ಬಂದು ಕುಳ್ಳಿರುವಲ್ಲಿ ಸಿಂಹಾಸನನಾಗುವೆನು |
ನಿಂದಲ್ಲಿ ಮೆಟ್ಟುವ ಹಾವಿಗೆಯಾಗುವೆ |
ಮಿಂದ ಬಚ್ಚಲಿಗೆ ಹಚ್ಚಿದ ಶಿಲೆಯಾಗುವೆ |
ಗಂಧವಾಗುವೆ ನಿನ್ನ ಅಂಗಾಲಿಗೆ 1

ಉಂಬಲ್ಲಿ ಬಿದ್ದ ಎಂಜಲ ತಿಂದು ಬದುಕುವೆ |
ಕರವ ತೊಳಿವೆ |
ಅಂಬುಜ ಕುಸುಮವಾಗಿ ಹಾಸಿಕೆಯಾಗುವೆ ಬಾಯ |
ದೊಂಬಲಿಗೆ ಕರವಡ್ಡಿ ಛಲ ಹೊರುವೆ2

ಪವಡಿಸುವ ಮನೆಯೊಳಗೆ ಸೂಜ್ಯೋತಿಯಾಗುವೆ |
ಸಿರಿ ವಿಜಯವಿಠ್ಠಲ |
ಜವನ ದೂತರನೊದದು ಸುಶುಚಿಯಾಗುವೆ3
*********