Showing posts with label ಶಿವ ಸತ್ತ ಎಂಥ ಆಶ್ಚರ್ಯವು pranesha vittala. Show all posts
Showing posts with label ಶಿವ ಸತ್ತ ಎಂಥ ಆಶ್ಚರ್ಯವು pranesha vittala. Show all posts

Sunday, 17 November 2019

ಶಿವ ಸತ್ತ ಎಂಥ ಆಶ್ಚರ್ಯವು ankita pranesha vittala

by ಪ್ರಾಣೇಶದಾಸರು
ಶಿವ ಸತ್ತ ಎಂಥ ಆಶ್ಚರ್ಯವು ಇದು ನೋಡಿ |ಕವಿಗಳು ಮನಕ ತಂದು ||ಭುವನತ್ರಯಗಳಲ್ಲಿ ಪ್ರಖ್ಯಾತವಾಗಿದೆ |ಅವಿವೇಕಿಗಳ ಮಾತಲ್ಲಾ ಪ

ಅಧಮರು ಬಹು ಬಗೆಯಿಂದಲ್ಲಿ ಘಳಿಸೀದಾ |ಬದುಕು ವ್ಯರ್ಥವಾಹದು ||ಬುಧರ ಪದಾರ್ಥವು ಸಾರ್ಥಕವಾಹದೆಂಬು |ದಿದೆ ಸಾಕ್ಷಿ ಎನಬಹುದೂ 1

ಭೂಭುಜರಿಗೆ ಭೂಷಣಾದವು ಆಯುಧ |ಈ ಭೂಮಿ ಪೊತ್ತ ವ್ಯಾಳಾ ||ಆ ಭಿಕ್ಷುಕನ ಕುಟುಂಬವ ರಕ್ಷಿಸುತಿಹ್ಯದು |ಶೋಭಿಸುತಿಹ್ಯ ಕಪಾಲಾ 2

ಮಂದೀಯ ನಂಜಿಸುತಿಪ್ಪದು | ಆತನಹಿಂದೆ ಮುಂದಿರುವ ಗಣಾ ||ನಂದೀ ಪಿತೃಗಳಿಗೆ ಕೈವಲ್ಲ್ಯಾ ತೋರಿತು |ಸಂದೇಹವಿನಿತಿಲ್ಲವೂ 3

ಸೋಮಕಂಣಾದ ಜಗತ್ತೆಕ್ಕ ದಿಕ್ಕಿಗೆ |ಸ್ವಾಮಿ ಎನಿಸಿದ ವನ್ಹೀ ||ಧೀಮಂತರಾತನ ಮಡದೀಯ ಪೂಜಿಸಿ |ಶ್ರೀಮಂತರಾಗೂವರೂ 4

ಮೌನಿಗಳಿಗೆ ಚರ್ಮ ವೈಷ್ಣವರಿಗೆ ಭಸ್ಮ |ತಾನು ಪ್ರೀಯಕರಾದೀತು ||ಪ್ರಾಣೇಶ ವಿಠಲಾನೊಳರ್ಧಾಂಗ ವಾಗಭಿ |ಮಾನಿಯೊಳರ್ಧವಿಟ್ಟಾ 5
*******