ರಾಗ - : ತಾಳ -
ದೇವ ಬೆಳಗಾಯಿತೋ ಎನ್ನಯ ಸೇವಾ ll ಪ ll
ಸ್ವೀಕರಿಸೋ ಮಹಾನುಭಾವ ದೇವ ll ಅ ಪ ll
ಮಧುರಗಾನವೇ ಗಂಗಾಸ್ನಾನ l
ಹೃದಯ ಶುದ್ಧಿಯೇ ಬದರೀಸ್ನಾನ l
ಬದಿಯಲಿರುವ ಭಕುತರ ಸಹವಾಸವೇ l
ನದಿನದಗಳವಗಾಹನ ಸ್ನಾನವೋ ll ೧ ll
ಹಾಲಿಗೆ ಕರದಲಿ ಥಾಲಿಯ ಪಿಡಿದು l
ಕೋಲಾಹಲ ಕಲಭಾಷಣ ಮಾಡುವ l
ಬಾಲರ ನಗುಮೊಗ ನೋಡಲು ಕೃಷ್ಣನ l
ಲೀಲೆಯ ಸಂದರ್ಶನಾನಂದವೋ ll ೨ ll
ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆ l
ಕಲ್ಹಾರದ ನವ ಕುಸುಮದ ರಾಶಿಯ l
ಚಿಲ್ಲೆ ಪಿಲ್ಲೆಗಳ ಬಹುರೂಪದಿ ಶ್ರೀ l
ನಲ್ಲ ನಿನಗೆ ಸಲ್ಲಿಸುವುದೇ ಭಾಗ್ಯವೋ ll ೩ ll
ತಾತನೆಂದು ಮೊರೆಯಿಡುವರು ನೀ ಅನ್ನ l
ದಾತನೆಂದು ಮೊರೆಯುತಿಹರೋ l
ತಾತನ ಕಿವಿಗೆ ಮಾತನು ತಿಳಿಸಲು l
ದೂತನು ನಾ ಕಾದಿಹೆನೊ ಪ್ರಸನ್ನನೇ
ಶ್ರೀ ವಿದ್ಯಾಪ್ರಸನ್ನ ತೀರ್ಥರ ಕೃತಿ
***