Showing posts with label ನೋಡಿದೆ ನಿಂದು ಗುರುರಾಜರಾ ನಾಡಿನೊಳಗೆ ಪ್ರಖ್ಯಾತರಾದರ siriaja vittala. Show all posts
Showing posts with label ನೋಡಿದೆ ನಿಂದು ಗುರುರಾಜರಾ ನಾಡಿನೊಳಗೆ ಪ್ರಖ್ಯಾತರಾದರ siriaja vittala. Show all posts

Monday, 6 September 2021

ನೋಡಿದೆ ನಿಂದು ಗುರುರಾಜರಾ ನಾಡಿನೊಳಗೆ ಪ್ರಖ್ಯಾತರಾದರ ankita siriaja vittala

 ರಾಗ: [ಕರ್ಣರಂಜಿನಿ] ತಾಳ: [ಆದಿ]

ನೋಡಿದೆ ನಿಂದು ಗುರುರಾಜರಾ

ನಾಡಿನೊಳಗೆ ಪ್ರಖ್ಯಾತರಾದರ

ಪ್ರಹಲ್ಲಾದ ಮುನಿಯ ಅವತಾರ

ಅಹಲ್ಲಾದವನು ನೀಡುವರ

ಮೋಹಿನಿ ರೂಪನ ನೋಡಿದರ

ಮೋಹಭವಂಗಳ ನೀಗಿದರ 1

ಮಂಚಾಲದಲಿ ನೆಲೆಸಿದರಾ

ಸಂಚಿತಾಗಮಗಳ ನೋಡಿ ಪರಾ

ವಂಚಿಸದೆಮಗೆ ಫಲ ನೀಡುವರಾ

ಪಂಚೇಂದ್ರಿಯಂಗಳ ಜೈಸಿದರಾ 2

ಸಿರಿಅಜವಿಠಲನ ಜಪಿಸಿದರ

ನರಹರಿರೂಪನ ನೋಡಿದರ

ಕರದಲಿ ಜಪಮಣಿ ಎಣಿಸುವರ

ಮರುಕದಿ ಶರಣರಿಗೊಲಿಯುವರ 3

***