Showing posts with label ಎಲೆ ಸಖಿಯೆ ಪೋಗು ವಿಠಲನ ಬಳಿಗೆ ಬೇಗವನ ತಾರೆ ಎನ್ನ ಮನೆಗೆ hayavadana ELE SAKHIYE POGU VITALANA BALIGE BEGAVANA TAARE ENNA MANEGE. Show all posts
Showing posts with label ಎಲೆ ಸಖಿಯೆ ಪೋಗು ವಿಠಲನ ಬಳಿಗೆ ಬೇಗವನ ತಾರೆ ಎನ್ನ ಮನೆಗೆ hayavadana ELE SAKHIYE POGU VITALANA BALIGE BEGAVANA TAARE ENNA MANEGE. Show all posts

Saturday, 11 December 2021

ಎಲೆ ಸಖಿಯೆ ಪೋಗು ವಿಠಲನ ಬಳಿಗೆ ಬೇಗವನ ತಾರೆ ಎನ್ನ ಮನೆಗೆ ankita hayavadana ELE SAKHIYE POGU VITALANA BALIGE BEGAVANA TAARE ENNA MANEGE

ಎಲೆ ಸಖಿಯೆ ಪೋಗು ವಿಠಲನ ಬಳಿಗೆಬೇಗವನ ತಾರೆ ಎನ್ನ ಮನೆಗೆ ಪ.

ಚಂದ್ರ ಉದಿಸುತಲಿ ಬಂದ ರಂಜಿಸುತರ-ವಿಂದಬಾಣ ನಡೆತಂದಮಂದಮಾರುತ ಮುಂದೆ ನಿಂದ ಅವ ಕುಸುಮ-ಗಂಧದಿಂದಲೆನ್ನ ಕೊಂದ1

ಕೀರ ನುಡಿಯುತಿದೆ ಧೀರ ಕೋಕಿಲಿಯಸ್ವರ ಕರ್ಣಕಠೋರಮಾರ ಬೇಗ ಹರಿಬಾರದಿರೆ ಕೆಳದಿಕ್ರೂರ ಎನ್ನ ಕೊಲ್ಲದಿರ 2

ಜೀಯ ಸುಜನರ ಸಹಾಯ ನಿಗಮಕುಲಗೇಯ ನಿರ್ಧೂತ ಹೇಯಪ್ರಿಯ ಹಯವದನರಾಯ ಸಖಿ ಎನ್ನಕಾಯಲಿನ್ನೇನು ಉಪಾಯ 3

***