Showing posts with label ಮದನ ಜನಕ ಪುರು ಷೋತ್ತಮ ಪರತರ ಶೇಷಗಿರಿವಾಸಾ gurumahipati. Show all posts
Showing posts with label ಮದನ ಜನಕ ಪುರು ಷೋತ್ತಮ ಪರತರ ಶೇಷಗಿರಿವಾಸಾ gurumahipati. Show all posts

Wednesday, 1 September 2021

ಮದನ ಜನಕ ಪುರು ಷೋತ್ತಮ ಪರತರ ಶೇಷಗಿರಿವಾಸಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಮದನ ಜನಕ ಪುರು| ಷೋತ್ತಮ ಪರತರ ಶೇಷಗಿರಿವಾಸಾ| ಪ 


ಕರುಣ ನೋಟದಿ ಸರ್ವಜೀವನುಳಹಿ ಕೊಂಡು| ಅಮೃತ ನುಣಿಸಿದನು| ಧರಣಿಯ ಮೋಹಿಸಿ ಬಿಗಿದಪ್ಪಿ ತರಳನು| ಹರಣಗಾಯ್ವ ದೇವ ಶರಣೆಂದೆನಲ್ಲದೆ| ತೆರೆಗಣ್ಣಿನವನೇಂದೆನೇ ಉಬ್ಬಿಗೊಂಡ| ಬಿರುಸು ಮೈಯ್ಯವನೆಂದನೇ ದಾಡಿಲಿಂದ| ಸುರಿವ ಜೊಲ್ಲುವನೆಂದನೇ ಬ್ರಹ್ಮಾದಿಗ| ಳರಸ ಉಗ್ರಾವ ತಾರೀ ಬಾಯೆಂದೆನಲ್ಲದೆ1 

ಚಿಕ್ಕಮಾಟದಿ ಬಹು ಚಲುವ ಭೂಸುರರುಗೆ ಪುಕ್ಕಟೆ ಅರಸು ತನವ ಕೊಟ್ಟನು| ಸಿಕ್ಕಿದ ದೇವರ ಸೆರೆಬಿಡಿಸಿದ ಕುಂತೀ| ಸಾರಥಿ ಶರಣೆಂದೆನಲ್ಲದೇ| ಕಕ್ಕು ಲಾತೆವನೆಂದೆನೇ ಕೊಡಲಿಹೊತ್ತ| ನಿಕ್ಕರುಣಿಕನೆಂದನೇ ವಾನರ ಕೂಡಾ| ಹೊಕ್ಕವನನೆಂದೆನೇ ಕೌರವರ| ಸೊಕ್ಕು ಮುರಿದ ಸ್ವಾಮಿ ಬಾಯೆಂದೆನಲ್ಲದೆ2 

ನೊಸಲಗಣ್ಣಿನವನ ಸಾಹ್ಯಕ ಶರವಾಗಿ| ಯಶೆವ ಮುಪ್ಪುರವನು ಧರೆಗಿಳುಹೀ| ವಸುಧಿಲಿ ಕಲಿಮಲ ಬಿಡಿಸಿ ಸಜ್ಜನರಪಾ| ಲಿಸಿದ ಮಹಿಪತಿ ಸುತಪ್ರಭು ಎಂದೆನಲ್ಲದೆ ಹುಸಿನುಡಿಯುವ ನೆಂದನೇ ಯವನರ| ದೆಸಿಗೆಡಿಸಿದ ನೆಂದನೇ ಆರಿಗೆ ನೆಲೆ| ತುಸುಗುಡದವ ನೆಂದನೇ ಜಗದೊಳು| ದಶ ಅವತಾರನೇ ನಮೋ ಎಂದೆ ನಲ್ಲದೆ.3

***