Showing posts with label ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯ ರಂಗ ನಿಲ್ಲೊ purandara vittala ELLELLI AADI BANDE HELAYYA RANGA NILLO. Show all posts
Showing posts with label ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯ ರಂಗ ನಿಲ್ಲೊ purandara vittala ELLELLI AADI BANDE HELAYYA RANGA NILLO. Show all posts

Sunday, 5 December 2021

ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯ ರಂಗ ನಿಲ್ಲೊ purandara vittala ELLELLI AADI BANDE HELAYYA RANGA NILLO




ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯ ರಂಗ
ನಿಲ್ಲೊ ನಿಲ್ಲೊ ತಾಳೊ ತಾಳೊ ಗೋವಿಂದ ||ಪ ||

ಮುಖದಲ್ಲಿ ಕಿರುಬೆವರಿಟ್ಟಿದೆ
ಹೊಸ ಹೊಸ ಪರಿ ಸುದ್ದಿ ಹುಟ್ಟಿದೆ
ನಸುನಗುವೆಲ್ಲ ನಿನ್ನ ಕೀರ್ತಿ ಹೆಚ್ಚಿದೆ ||

ಕೈಯಲ್ಲಿ ಉಂಗುರ ಎಲ್ಲಿ ಹೋಗಿದೆ
ನಿನ್ನ ಬದುಕೆಲ್ಲ ಅವಳಿಗೆ ಸಾಗಿದೆ
ಅಲ್ಲ ಅವಳ ಮಹಿಮೆ ಹೀಗಿದೆ ||

ನಿನ್ನ ಕಳವು ನಾನು ಎಷ್ಟೆಂದು ಹೇಳಲಿ
ಕಡೆಯಿಂದ ಕಡೆಗೆ ತಾಳಿದೆ
ಕಡೆಗೆಲ್ಲ ಹರುಷ ತೋರಿದೆ
ಪುರಂದರವಿಠಲ ನಿನಗೆ ನನಗೆ ಹೀಗಾಗಿದೆ ||
****

ರಾಗ ಶಂಕರಾಭರಣ. ಅಟ ತಾಳ (raga, taala may differ in audio)

pallavi

ellelli Adi bande hELayya ranga nillo nillo tALo tALo gOvinda

caraNam 1

mukhadalli krpevariTTIde hosa hosa pari suddi huTTide nasunaguvella ninna kIrti heccide

caraNam 2

kaiyalli ungura elli hOgide ninna badukella avaLige sAgide alla avaLa mahime hIgide

caraNam 3

ninna kaLavu nAnu eSTendu hELali kaDEyinda kaDege tALide
kaDegella haruSa tOride purandara viTTala ninage nanake hIgAgide
***