Showing posts with label ಓಡಿ ಬಾರೋ ಶ್ರೀ ಮನ್ಮಥ ಜನಕನೆ ನೀಡುವೆ ತನುಮನವಾ tandeshreenarahari. Show all posts
Showing posts with label ಓಡಿ ಬಾರೋ ಶ್ರೀ ಮನ್ಮಥ ಜನಕನೆ ನೀಡುವೆ ತನುಮನವಾ tandeshreenarahari. Show all posts

Thursday, 5 August 2021

ಓಡಿ ಬಾರೋ ಶ್ರೀ ಮನ್ಮಥ ಜನಕನೆ ನೀಡುವೆ ತನುಮನವಾ ankita tandeshreenarahari

 ..

kruti by tandeshreenarahari

ಓಡಿಬಾರೋ ಶ್ರೀ ಮನ್ಮಥ ಜನಕನೆ ನೀಡುವೆ ತನುಮನವಾ ಪ.


ನೋಡಿ ಮುದ್ದಾಡಿ ಕೊಂಡಾಡಿ ನಾ ಬೇಡುವೆಈಡಿಲ್ಲದ ನಿನ್ನೊಡನಾಡುವ ಸುಖ ಅ.ಪ.

ಕಾಡಿನ ಸುಖಕೆ ಮತ್ತೀಡಿಲ್ಲ ಧರೆಯೊಳುಮಾಡುವೆ ಶಪಥವನುಹಾಡಿಪಾಡಿ ಕೈಜೋಡಿಸಿ ಕುಣಿಯುತಮಾಡಿದೆವೊ ನಾವ್ ರಾಸಕ್ರೀಡೆಯ 1

ಧ್ವಜ ವಜ್ರಾಂಕುಶ ಚಿನ್ಹಕಂಜ ಸುರೇಖೆಗಳ ಪುಂಜ ಪೂರಿತಪಾದಕಂಜನಾಭ ಹೃತ್ಪಂಜರದೊಳಿಟ್ಟುಮಂಜು ಬಿಡಿಸು ನಿರಂಜನ ಮೂರ್ತೆ 2

ನೀರಜನಾಭನೆ ತೋರೋಕರಪಲ್ಲವಮೀರಿವೆ ಹೃದಯ ಸಂತಾಪಗಳುಮಾರ ಮೋಹನ ಸಾರುವೆ ನಿನ್ನಯಜಾರ ಬುದ್ಧಿಯ ತಾಪವ ನೀಗಿಸು 3

ಮಂದಸ್ಮಿತಾನನ ಚಂದ್ರಪೋಲುವ ಸದನಬಿಂದುಮಾಧವಾ ಯಾದವಾವಂದಿಸಿಬೇಡುವ ಸುಂದರಿ ಸುಖ ಮುಖಿಬೃಂದ ಕಮಲ ವಿಹಂಗಮರಾಜ 4

ನೀನೇ ದಯಾಪರ ನೀನೇ ಭಕ್ತೋದ್ಧಾರನೀನೇ ಗತಿ ಪರನಾರೆರಿಗೆಪಾಣಿಮುಗೆವೆಯಮ್ಮ ವಾಣಿಯ ಲಾಲಿಸಿ ವೇಣುನಾದ ತೋರೊ ತಂದೆ ಶ್ರೀನೃಹರೇ 5

***