ಹರಪನಹಳ್ಳಿ ಭೀಮವ್ವ
ಇದು ಏನೆಶೋದಾ ಇದು ಏನೆಶೋದಾ
ದಧಿಯ ದಾಮೋದರ
ಹೆದರಿಕಿಲ್ಲದೆ ಕುಡಿದೋಡಿ ತಾ ಪೋದ ।।ಪ।।
ಕೊಳಲನೂದುತಿರೆ ಆಕಳನೆ ಕಾಯುತಲ್ಹೋಗಿ
ಕಳಲ ಗಡಿಗೆ ಸುತ್ತ ಕುಣಿದಾಡುವುದು ।।೧।।
ವತ್ಸ ಕಾಯುತ ವನದೊಳಗೆ ಆಡೆಂದರೆ
ಕಿಚ್ಚುನುಂಗಿ ಸರ್ಪವ ತುಳಿಯುವುದು ।।೨।।
ಚೆಂಡನಾಡುತ ತುರುವ್ಹಿಂಡು ಕಾಯೆಂದರೆ
ಗಂಡನುಳ್ಳವರ್ಹಿಂದ್ಹಿಂದೆ ತಿರುಗುವುದು ।।೩।।
ವತ್ಸನಂದದಲಿ ಬಾಯ್‍ಹಚ್ಚಿ ಗೋವಿನ ಕ್ಷೀರವ
ಅಷ್ಟು ಕುಡಿದನಾಶ್ಚರ್ಯ ನೋಡಮ್ಮ ।।೪।।
ಇಂದೆನ್ನ ಮನೆಯಲ್ಲೊಂದಿಷ್ಟು ಕ್ಷೀರಗಳಿಲ್ಲ
ಗಂಡನತಿ ದುಷ್ಟೆನ್ನ ಕೊಲ್ಲುವನಮ್ಮ ।।೫।।
ಮೌನಗೌರಿಯ ನೋಟು ನೀರೊಳಗಿದ್ದೆವೆ
ಮಾನಹೀನರ ಮಾಡಿ ಮರವನೇರುವುದು ।।೬।।
ಬ್ಯಾಡೋ ಕೃಷ್ಣನೆ ಬಟ್ಟೆ ನೀಡೆಂದಾಲ್ಪರಿಯಲು
ಜೋಡಿಸಿ ನಿಮ್ಹಸ್ತ ಮುಗಿಯಿರೆಂದಾಡುವುದು ।।೭।।
ಬುದ್ಧಿಹೇಳೆಂದರೆ ಮುದ್ದುಮಾಡುವರೇನೊ
ಕದ್ದುಬಂದರೆ ಕಾಲು ಕಟ್ಟಿ ಹಾಕಮ್ಮ ।।೮।।
ಅಂಧಕಾರದ ಮನೆಯೊಳಿಟ್ಟಿದ್ದ ದಧಿ ಬೆಣ್ಣೆ
ಚಂದ್ರನಂತ್ಹೊಕ್ಕು ತಾ ತಿಂದ ನೋಡಮ್ಮ ।।೯।।
ಕೇರಿಮಕ್ಕಳ ನೋಡೋ ಮಹರಾಯ ಬಲರಾಮ
ದೊಡ್ಡ ಮಗನು ಎಲ್ಲೆ ದೊರಕಿದನಮ್ಮ ।।೧೦।।
ಮೀಸಲ್ಹಾಕಿದ ಬೆಣ್ಣೆ ನೀ ಸವಿದೀಯೆಂದು
ಲೇಸಾಗಿ ಹೇಳೆ ಭೀಮೇಶಕೃಷ್ಣನಿಗೆ ।।೧೧।।
*********
ಇದು ಏನೆ ಯಶೋದೆ ಇದು ಏನೆ ಯಶೋದೆ
ದಧಿಯ ದಾಮೋದರ ಹೆದರಿಕಿಲ್ಲದೆ
ಕುಡಿದೋಡಿ ತಾ ಪೋದ ಪ
ಕೊಳಲನೂದುತಲೆ ಆಕಳನೆ ಕಾಯುತಲ್ಹೋಗಿ
ಕಳಲ ಗಡಿಗೆಸುತ್ತ ಕುಣಿದಾಡುವುದು 1
ವತ್ಸಕಾಯುತ ವನದೊಳಗೆ ಆಡೆಂದರೆ
ಕಿಚ್ಚುನುಂಗಿ ಸರ್ಪವ ತುಳಿಯುವುದು 2
ಚೆಂಡನಾಡುತ ತುರುವ್ಹಿಂಡು ಕಾಯೆಂದರೆ
ಗಂಡನುಳ್ಳವರ್ಹಿಂದ್ಹಿಂದೆ ತಿರುಗುವುದು 3
ವಛ(ತ್ಸ?) ನಂದದಲಿ ಬಾಯ್ ಹಚ್ಚ ಗೋವಿನ ಕ್ಷೀರ
ಅಷ್ಟು ಕುಡಿದನಾಶ್ಚರ್ಯ ನೋಡಮ್ಮ 4
ಇಂದೆನ್ನ ಮನೆಯಲ್ಲೊಂದಿಷ್ಟು ಕ್ಷೀರಗಳಿಲ್ಲ
ಗಂಡ(ಅ?) ತಿ ದುಷ್ಟೆನ್ನ ಕೊಲ್ಲುವನಮ್ಮ 5
ಮೌನಗೌರಿಯ ನೋತು ನೀರೊಳಗಿದ್ದೆವೆ
ಮಾನಹೀನರ ಮಾಡಿ ಮರವನೇರುವುದು 6
ಬ್ಯಾಡೊ ಕೃಷ್ಣನೆ ಬಟ್ಟೆ ನೀಡೆಂದಾಲ್ಪರಿಯಲು
ಜೋಡಿಸಿ ನಿಮ್ಹಸ್ತ ಮುಗಿ(ಯಿ) ರೆಂದಾಡುವುದು7
ಬುದ್ಧಿಹೇಳೆಂದರೆ ಮುದ್ದು ಮಾಡುವರೇನೊ
ಕದ್ದು ಬಂದರೆ ಕಾಲು ಕಟ್ಟಿ ಹಾಕಮ್ಮ 8
ಅಂಧಕಾರದ ಮನೆಯೊಳಿಟ್ಟಿದ್ದ ದಧಿ ಬೆಣ್ಣೆ
ಚಂದ್ರನಂತ್ಹೊಕ್ಕು ತಾ ತಿಂದ ನೋಡಮ್ಮ 9
ಕೇರಿ ಮಕ್ಕಳ ನೋಡೊ ಮಹರಾಯ ಬಲರಾಮ
ದೊಡ್ಡಮಗನು ಎಲ್ಲೆ ದೊರಕಿದನಮ್ಮ 10
ಮೀಸಲ್ಹಾಕಿದ ಬೆಣ್ಣೆ ನೀ ಸವಿದೀಯೆಂದು
ಲೇಸಾಗಿ ಹೇಳೆ ಭೀಮೇಶಕೃಷ್ಣನಿಗೆ11
***
Idu enesoda
Idu enesoda dadhiya damodara
Hedarikillade kudidodi ta poda ||pa||
Kolalanudutire akalane kayutalhogi
Kalala gadige sutta kunidaduvudu ||1||
Vatsa kayuta vanadolage adendare
Kiccunumgi sarpava tuliyuvudu ||2||
Chendanaduta turuvhindu kayendare
Gandanullavar^hind~hinde tiruguvudu ||3||
Vatsanandadali bay^hacci govina kshirava
Ashtu kudidanascarya nodamma ||4||
Indenna maneyallondishtu kshiragalilla
Gandanati dushtenna kolluvanamma ||5||
Maunagauriya notu nirolagiddeve
Manahinara madi maravaneruvudu ||6||
Byado krushnane batte nidendalpariyalu
Jodisi nimhasta mugiyirendaduvudu ||7||
Buddhihelendare muddumaduvareno
Kaddubandare kalu katti hakamma ||8||
Andhakarada maneyolittidda dadhi benne
Chandranant~hokku ta tinda nodamma ||9||
Kerimakkala nodo maharaya balarama
Dodda maganu elle dorakidanamma ||10||
Misalhakida benne ni savidiyendu
Lesagi hele bimesakrushnanige ||11||
***
ಇದು ಏನೆ ಯಶೋದೆ ಇದು ಏನೆ ಯಶೋದೆ
ದಧಿಯ ದಾಮೋದರ ಹೆದರಿಕಿಲ್ಲದೆ
ಕುಡಿದೋಡಿ ತಾ ಪೋದ ||pa||
ಕೊಳಲನೂದುತಲೆ ಆಕಳನೆ ಕಾಯುತಲ್ಹೋಗಿ
ಕಳಲ ಗಡಿಗೆಸುತ್ತ ಕುಣಿದಾಡುವುದು ||1||
ವತ್ಸಕಾಯುತ ವನದೊಳಗೆ ಆಡೆಂದರೆ
ಕಿಚ್ಚುನುಂಗಿ ಸರ್ಪವ ತುಳಿಯುವುದು ||2||
ಚೆಂಡನಾಡುತ ತುರುವ್ಹಿಂಡು ಕಾಯೆಂದರೆ
ಗಂಡನುಳ್ಳವರ್ಹಿಂದ್ಹಿಂದೆ ತಿರುಗುವುದು ||3||
ವಛ(ತ್ಸ?) ನಂದದಲಿ ಬಾಯ್ ಹಚ್ಚ ಗೋವಿನ ಕ್ಷೀರ
ಅಷ್ಟು ಕುಡಿದನಾಶ್ಚರ್ಯ ನೋಡಮ್ಮ ||4||
ಇಂದೆನ್ನ ಮನೆಯಲ್ಲೊಂದಿಷ್ಟು ಕ್ಷೀರಗಳಿಲ್ಲ
ಗಂಡ(ಅ?) ತಿ ದುಷ್ಟೆನ್ನ ಕೊಲ್ಲುವನಮ್ಮ ||5||
ಮೌನಗೌರಿಯ ನೋತು ನೀರೊಳಗಿದ್ದೆವೆ
ಮಾನಹೀನರ ಮಾಡಿ ಮರವನೇರುವುದು ||6||
ಬ್ಯಾಡೊ ಕೃಷ್ಣನೆ ಬಟ್ಟೆ ನೀಡೆಂದಾಲ್ಪರಿಯಲು
ಜೋಡಿಸಿ ನಿಮ್ಹಸ್ತ ಮುಗಿ(ಯಿ) ರೆಂದಾಡುವುದು||7||
ಬುದ್ಧಿಹೇಳೆಂದರೆ ಮುದ್ದು ಮಾಡುವರೇನೊ
ಕದ್ದು ಬಂದರೆ ಕಾಲು ಕಟ್ಟಿ ಹಾಕಮ್ಮ ||8||
ಅಂಧಕಾರದ ಮನೆಯೊಳಿಟ್ಟಿದ್ದ ದಧಿ ಬೆಣ್ಣೆ
ಚಂದ್ರನಂತ್ಹೊಕ್ಕು ತಾ ತಿಂದ ನೋಡಮ್ಮ ||9||
ಕೇರಿ ಮಕ್ಕಳ ನೋಡೊ ಮಹರಾಯ ಬಲರಾಮ
ದೊಡ್ಡಮಗನು ಎಲ್ಲೆ ದೊರಕಿದನಮ್ಮ ||10||
ಮೀಸಲ್ಹಾಕಿದ ಬೆಣ್ಣೆ ನೀ ಸವಿದೀಯೆಂದು
ಲೇಸಾಗಿ ಹೇಳೆ ಭೀಮೇಶಕೃಷ್ಣನಿಗೆ||11||
*******