Showing posts with label ಬಾರಮ್ಮ ಶ್ರೀ ರಂಗಧಾಮನ ತಂದು ankita helavana katte BAARAMMA SRI RANGADHAAMANA TANDU. Show all posts
Showing posts with label ಬಾರಮ್ಮ ಶ್ರೀ ರಂಗಧಾಮನ ತಂದು ankita helavana katte BAARAMMA SRI RANGADHAAMANA TANDU. Show all posts

Thursday, 2 December 2021

ಬಾರಮ್ಮ ಶ್ರೀ ರಂಗಧಾಮನ ತಂದು ankita helavana katte BAARAMMA SRI RANGADHAAMANA TANDU



ಬಾರಮ್ಮ ಶ್ರೀ ರಂಗಧಾಮನ ತಂದು ತೋರಮ್ಮ
ವಾರಿಜಾಸನ ಸನಕಾದಿ ವಂದಿತ
ಪಾದ ತೋರಿದ ಮಹಿಮ ಧೀರ ಉದ್ಧಾರನ ||

ಬೃಂದಾವನದೊಳಗಾಡುವ ಶ್ರೀ ಗಂಧವ ಮೈಯೊಳು ತೀಡುವ
ಚಂದದಿ ಕೊಳಲನ್ನೂದುವ ನಮ್ಮ ಕಂದ ಜಲಕ್ರೀಡೆಯನಾಡುವ
ನಂದನಂದನ ಗೋವಿಂದನ ಕಾಣದೆ
ಒಂದು ನಿಮಿಷ ಯುಗವಾಗಿ ತೋರುತಲಿದೆ ||

ಉಡುವಸೀರೆ ಸೆಳೆದೋಡುವ ದೊಡ್ಡ ಕಡಹದ ಮರವ ತಾನೇರುವ
ಕೊಡಲೊಲ್ಲದೆ ಬಲು ಕಾಡುವ ಲಜ್ಜೆಗೆಡಿಸಿ ಮಾನಿನಿಯರ ಕೂಡುವ
ತಡವ್ಯಾತಕೆ ಸಖಿ ತವಕದಿಂದಲಿ ಪೋಗಿ
ಒಡೆಯನ ಕರೆತಾರೆ ಅಡಿಗೆರಗುವೆನಮ್ಮ ||

ನೀಲವರ್ಣ ನಿಜರೂಪನ ಶ್ರೀ ಲೋಲ ಹೆಳವನಕಟ್ಟೆ ವಾಸನ
ಲಾಲಿ ಹಾಡು ರಂಗೇಶನ ಮೂಲೋಕಕ್ಕೊಡೆಯ ಪಾಲಿಸೆನ್ನನ
ಆಲಸ್ಯವ್ಯಾತಕೆ ವಿನಯನ ಕರತಾರೆ
ಜಾಣೆ ನಿನಗೆ ಕಂಠ ಮಾಲೆ ಹಾಕುವೆನಮ್ಮ ||
***