Showing posts with label ಐಸಿರಿಯನೇನೆಂದು ಪಾಡಲಿ ಶ್ರೀಹರಿಯ ಮೈಸಿರಿಯ ಪಾದಾದಿ devapura lakshmikanta. Show all posts
Showing posts with label ಐಸಿರಿಯನೇನೆಂದು ಪಾಡಲಿ ಶ್ರೀಹರಿಯ ಮೈಸಿರಿಯ ಪಾದಾದಿ devapura lakshmikanta. Show all posts

Monday, 2 August 2021

ಐಸಿರಿಯನೇನೆಂದು ಪಾಡಲಿ ಶ್ರೀಹರಿಯ ಮೈಸಿರಿಯ ಪಾದಾದಿ ankita devapura lakshmikanta

ಐಸಿರಿಯನೇನೆಂದು ಪಾಡಲಿ ಶ್ರೀಹರಿಯ

ಮೈಸಿರಿಯ ಪಾದಾದಿ ಕೇಶ ಪರ್ಯಂತ ಪ


ಸಿರಿಯ ಕರಾಬ್ಜ ಪರಾಗದಿಂ ರಂಜಿಪ

ಸರಸಿಜ ಕುಂಕುಮರಜ ರಮ್ಯವೆಂದೆನಿಪ

ನಿರುತ ಯೋಗೀಂದ್ರ ಹೃತ್ಕಮಲವನರಳಿಪ

ತರುಣಾತಪದ ಕಾಂತಿಯೆನೆ ಕಂಗೊಳಿಪ

ವರಶ್ರುತಿ ಸೀಮಂತ ಸಿಂಧೂರವೆನೆ ತೋರ್ಪ

ಉರುಗಾಳಿಯ ಫಣಿ ರತುನಾರತಿಯೆನಿಪ

ಸುರುಚಿರ ಶೋಣ ಪ್ರವಾಳವ ಸೋಲಿಪ

ಅರುಣಾಂಬುರುಹದಂದದಿ ಥಳಥಳಿಪ 1


ಚರಣತಳಂಗಳೊಪ್ಪುವ ತನಿ ಕೆಂಪಿನ

ಶರಣ ಚಿಂತಾಮಣಿಯ ನಸುಗೆಂಪಿನ

ಧರಣಿಯನೀರಡಿ ಮಾಡಿದ ಪೆಂಪಿನ

ಕರುಣದಿ ಕಲ್ಲ ಪೆಣ್ಮಾಡಿದ ಸೊಂಪಿನ

ಕರ ಶಂಖ ಪದ್ಮ ರೇಖಾಂಕಿತದಿಂಪಿನ

ಕುರುನೃಪಗರ್ವ ನಿರ್ವಾಹಾಪಗುಂಪಿನ

ಸುರಮಣೀಮಕುಟ ನಾಯಕದ ಸೊಂಪಿನ

ಪರಮಪಾವನ ಪಾದದುಂಗುಟದಲಂಪಿನ 2


ಕಂಜಭವಾಂಡ ಸೋಂಕದ ಮುನ್ನ ಬೆಳಗುವ

ಸಂಜನಿಸಿಹ ಗಂಗೆ ಮುದದಲ್ಲಿ ಮುಳುಗುವ

ಭುಂಜಿಸಿತಮಸ ಜಗಂಗಳ ಬೆಳಗುವ

ಮಂಜೀರ ಕಡಗ ಭಾಪುರಿಗಳಿಂ ಮೊಳಗುವ

ಮಂಜುಳಾಂಗದಿ ನಖಪಂಕ್ತಿಗಳ್ ತೊಳಗುವ

ರಂಜನೆಯಿಂ ಶ್ರೀಮದಂಘ್ರಿಗಳೆಸೆವ

ವಂಚಿತ ಸೌಮ್ಯ ಜಂಘೆಗಳಿಂ ಸೊಗಯಿಸುವ

ಕುಂಜರ ರುಚಿಯ ಪೂರ್ಣೇಂದು ರಂಜಿಸುವ 3


ಅಳವಟ್ಟ ಪೀತಾಂಬರದ ಸುಮಧ್ಯದ

ಕಳಕಾಂಚಿದಾಮದುನ್ನತ ಕಟಿತಟದ

ನಳಿನಾಲವೋದಿತ ನಾಭಿಪಂಕರುಹದ

ಇಳೆಯ ಜನಂಗಳಿಗೆನಿಸುವ ವುದರದ

ವಿಳಸದಲಂಕೃತ ಬಾಹು ಚತುಷ್ಟದ -

ಮಳ ಶಂಕಚಕ್ರ ಸದಬ್ಜ ಸಂಭೃತದ

ಪೊಳೆವ ಕೌಸ್ತುಭಮಣಿ ಶ್ರಿವತ್ಸೋದರದ

ತುಳಸಿ ಮಂದಾರ ಮಾಲೆಗಳ ಕಂಧರದ 4


ಘನ ಸೌಭಗ ಗಂಡಮಂಡಲಯುಗ್ಮದ

ಮನೋಹರ ಮಕರಕುಂಡಲ ಕರ್ಣಯುಗ್ಮದ

ವನಜ ನೇತ್ರಂಗಳ ಕರುಣಾಕಟಾಕ್ಷದ

ವಿನುತ ಮೌಕ್ತಿಕದಿಂದ ಮೆರೆವ ನಾಸಿಕದ

ನಸು ಮೋಹನದಿ ಸಮನಿಪ ಚುಬುಕಾಗ್ರದ

ತನಿರಸ ತುಳುಕುವ ಚೆಲುವಿನಧರದ

(?)ಲಲಿತ ವದನದ ವರದಂತಪಂಙ್ತಯ

ಇನಿಗೆದರುವೆಳನಗೆಯ ಸಿರಿಮೊಗದ 5


ಸಿಂಗಾಡಿಯಿಂ ಮಿರುಗುವ ಪುರ್ಬುಗಳ ಸ -

ದ್ಭøಂಗಾಳ ಕಂಗಳ ಮಿರುಪ ನಾಸಿಕ ಬೆಳ

ದಿಂಗಳ ಪೊಂಗಿನ ಕಸ್ತೂರಿ ತಿಲಕ ರ

ತ್ನಾಂಗದ ರಂಗಿನ ಮಕುಟ ಮಸ್ತಕದ ನೀ

ಲಾಂಗದಳಾಂಗನೆಯರು ಸುರಪುರ ಮಧ್ಯ

ರಂಗದೊಳಂಗನೆಯರು ಕೂಡಿ ನಿಖಿಳ ಜ

ಗಂಗಳ ಹಿಂಗದೆ ಪೊರೆವ ಶ್ರೀ ಲಕ್ಷ್ಮೀಶ

ಮಂಗಳೋತ್ತುಂಗ ಮೂರುತಿಗೆ ನಮೋ ನಮೋ 6

****