Showing posts with label ವ್ಯರ್ಥವಲ್ಲವೆ ಜನ್ಮ ವ್ಯರ್ಥವಲ್ಲವೆ rangavittala. Show all posts
Showing posts with label ವ್ಯರ್ಥವಲ್ಲವೆ ಜನ್ಮ ವ್ಯರ್ಥವಲ್ಲವೆ rangavittala. Show all posts

Wednesday, 11 December 2019

ವ್ಯರ್ಥವಲ್ಲವೆ ಜನ್ಮ ವ್ಯರ್ಥವಲ್ಲವೆ ankita rangavittala

ವ್ಯರ್ಥವಲ್ಲವೆ ಜನ್ಮ ವ್ಯರ್ಥವಲ್ಲವೆ ||ಪ||
ತೀರ್ಥಪಾದರ ಭಜಿಸಿ ಕೃತಾರ್ಥನಾಗದವನ ಜನ್ಮ ||ಅ.ಪ||

ಅರುಣ ಉದಯದಲ್ಲಿ ಎದ್ದು ಸರಿತದಲಿ ಸ್ನಾನವ ಮಾಡಿ
ಅರಳುಮಲ್ಲಿಗೆ ಮಾಲೆ ಹರಿಯ ಚರಣಕರ್ಪಿಸದವನ ಜನ್ಮ ||೧||

ಒಂದು ಶಂಖ ಉದಕ ತಂದು ಚಂದದಿಂದ ಹರಿಗೆ ಎರೆದು
ಗಂಧ ಪುಷ್ಪದಿಂದ ಹರಿಯ ವಂದನೆ ಮಾಡದವನ ಜನ್ಮ ||೨||

ಮುಗುಳು ತೆನೆಯಲೆಸೆವ ತುಳಸಿದಳವ ತಂದು ಪ್ರೇಮದಿಂದ
ಜಗನ್ಮಯಗೆ ಅರ್ಪಿಸಿ ಕರವ ಮುಗಿದು ಸ್ತುತಿಸದವನ ಜನ್ಮ ||೩||

ಭೋಗಿಶಯನನ ದಿನದಿ ಸಕಲ ಭೋಗಗಳನು ತಾನು ತೊರೆದು
ಭಾಗವತರ ಮ್ಯಾಳದಿಂದ ಜಾಗರಣೆ ಮಾಡದವನ ಜನ್ಮ ||೪||

ಜಂಗಮರೊಳಗಧಿಕವನಿಪ ಭಂಗುರ ಮನುಷ್ಯದೇಹ ಪಡೆದು
ರಂಗವಿಠಲನೆನಿಪ ಪಶ್ಚಿಮರಂಗಗರ್ಪಿಸದವನ ಜನ್ಮ ||೫||
***

Vyarthavallave janma vyarthavallave || pa ||

Teerthapaadara bhajisi krutaarthanaagadavana janma || a. Pa ||

Aruna udayadalli eddu saritadali snaanava maadi |
aralu mallige maale hariya charanakarpisadavana janma || 1 ||

Ondu shankha udaka tamdu chandadinda harige eredu |
gandha pushpadinda harige vandane maadadavana janma || 2 ||

Mugulu teneyaleseva tulasidala tandu premadinda |
jaganmayage arpisi karava mugidu stutisadavana janma || 3 ||

Bhogishayanana dinadi sakala bhogagalanu taanu toredu |
bhaagavatara myaaladinda jaagarane maadadavana janma || 4 ||

Jangamarodhikavenipa bhangura manushyadeha padedu |
rangaviththalanenipa pashcimarangagarpisadavana janma || 5 ||
****