Showing posts with label ಶಂಕರ ದೇವನಾಲಂಕಾರ jagannatha vittala. Show all posts
Showing posts with label ಶಂಕರ ದೇವನಾಲಂಕಾರ jagannatha vittala. Show all posts

Saturday, 14 December 2019

ಶಂಕರ ದೇವನಾಲಂಕಾರ ankita jagannatha vittala

ಜಗನ್ನಾಥದಾಸರು
ಶಂಕರ ದೇವನಾಲಂಕಾರ ಶಯನ ಶಂಖ ನೃಪನ ಪಾಲಾ
ಶಂಖಾದಿ ಸೂದನ ಶಂಕೆಯಿಲ್ಲದೆ ತಾಯಿ
ಸಂಕಲೆ ಕಡಿದ ಶಶಾಂಕಕೋಟಿ ಪ್ರಭಾವ
ಸಂಕರುಷಣ ದೇವ ಶಂಖಾರಿಧರನೆ 1

ಕಂಬದಿ ಬಂದಚ್ಯುತನೆ
ಗೊಲ್ಲರ ಸಲಹಿದ ಗೋವರ್ಧನಧರ ಪುಲ್ಲ ಲೋಚನನೆ2

ಅಖಿಳ ಅಸುರರ ಶಕುತಿಯ
ಅಪಹರಿಸಿದ ಅದಿತಿ ರುಕ್ಮಿಣಿಯೊಡನೆ ವಿಹಾರ ಸಕಲ
ಸುರರೊಡೆಯ ಸಾಮಗಾಯನಲೋಲ ಶಕುಜನಕನೆ3

ಶಾಮಲ ಶರೀರ ವರ್ಣ ವಿನುತ
ರೋಮ ರೋಮ ಕೂಪದಿ ಆನಂದ ಭರಿತ
ದಾಮೋದರ ವಿಶ್ವದಾನಿಗಳರಸನೇ ಸಾಮಜವರದ 4

ಸನ್ನುತ ಚರಣ
ಅನಿರುದ್ಧ ದೇವನೆ ಅಸುರ ಸಂಹರಣಾ
ಕನಕಗರ್ಭಾದಿ ಸುರಕಟಕ ಪಾಲಕನೆ
ವನಜ ಜಾಂಡವ ಪೆತ್ತ ವೈಕುಂಠ ಪುರಾಧೀಶ 5

ಫಣಿ ಫಣ ಮರ್ದನ ಪ್ರಣವ ಪ್ರತಿಪಾದ್ಯ ಪ್ರ
ಸನ್ನವದನಾ ರಣರಂಗ ಭೀಮಾ ಭಕುತ
ಜನ ಮೋದನಾ ಅಣು ಸ್ಥೂಲದಲಿ
ಗಮನ 6

ಶ್ವೇತವಾಹನನ ಸಮರದಿ ಕಾಯಿದಾ
ಅಖಿಳ ಜೀವ ಭೇದಾ
ದರ ಪರಮ ಸುಮೋದಾ
ಭೀತಿರಹಿತ ಕಲ್ಪಭೂಜನೆನಿಪ ಜಗನ್ನಾಥವಿಠ್ಠಲನೆ 7
*******