Showing posts with label ಸತ್ಯಪ್ರಿಯ ತೀರ್ಥಾರ್ಯರಂಘ್ರಿ prasannashreenivasa satyapriya teertha stutih. Show all posts
Showing posts with label ಸತ್ಯಪ್ರಿಯ ತೀರ್ಥಾರ್ಯರಂಘ್ರಿ prasannashreenivasa satyapriya teertha stutih. Show all posts

Thursday 5 August 2021

ಸತ್ಯಪ್ರಿಯ ತೀರ್ಥಾರ್ಯರಂಘ್ರಿ ankita prasannashreenivasa satyapriya teertha stutih

 ..

kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು

ಶ್ರೀ ಸತ್ಯಪ್ರಿಯ ತೀರ್ಥ ವಿಜಯ


ಸತ್ಯಪ್ರಿಯ ತೀರ್ಥಾರ್ಯರಂಘ್ರಿ ವೃತತಿಜ ಯುಗ್ಮ

ನಿತ್ಯ ಸ್ಮರಿಸುವೆ ಎನ್ನ ಹಿತದಿ ಕಾಯುತಿಹರು |

ಸತ್ಯಾರುಕ್ಮಿಣೀ ರಮಣ ವ್ಯಾಸ ನರಹರಿ ಹಯ

ವಕ್ತ್ರ ಶ್ರೀರಾಮನಿಗೆ ಪ್ರಿಯತರ ಮಹಂತ ಪ


ಅಶೇಷಗುಣಗಣಾಧಾರ ವಿಭು ನಿರ್ದೋಷ

ಹಂಸ ಶ್ರೀ ಪತಿಯಿಂದುದಿತ ಗುರುಪರಂಪರೆಗೆ

ಬಿಸಜಭವ ಸನಕಾದಿ ದೂರ್ವಾಸ ಮೊದಲಾದ

ವಂಶಜರು ಅಚ್ಚುತ ಪ್ರೇಕ್ಷರಿಗೆ ನಮಿಪೆ 1

ಪುರುಷೋತ್ತಮ ತೀರ್ಥ ಅಚ್ಚುತ ಪ್ರೇಕ್ಷರ

ಕರಕಮಲ ಜಾತರೂ ಮಹಾಭಾಷ್ಯಕಾರರು

ವರವಾಯು ಅವತಾರ ಆನಂದ ತೀರ್ಥರ

ಚರಣವನಜದಿ ನಾ ಸರ್ವದಾ ಶರಣು 2

ಪದ್ಮನಾಭ ನರಹರಿ ಮಾಧವ ಅಕ್ಷೋಭ್ಯ

ಅದ್ವಿತೀಯ ಸುಸ್ಪಷ್ಟ ಟೀಕಾಗಳಿತ್ತ

ಮೇಧಾ ಪ್ರವೀಣ ಜಯ ತೀರ್ಥಾರ್ಯರಿಗೂ

ವಿದ್ಯಾಧಿರಾಜರಿಗೂ ನಮೋ ನಮೋ ಶರಣು 3

ವಿದ್ಯಾಧಿರಾಜರಿಗೆ ಶಿಷ್ಯರು ಈರ್ವರು

ಮೊದಲನೆಯವರು ರಾಜೇಂದ್ರ ತೀರ್ಥಾರ್ಯ

ನಂತರ ಕವೀಂದ್ರ ತೀರ್ಥಾರ್ಯ ಇವರುಗಳ

ಪಾದಾರವಿಂದಗಳಿಗೆ ನಾ ನಮಿಪೆ 4

ವಾಗೀಶ ತೀರ್ಥರು ಕವೀಂದ್ರ ಹಸ್ತಜರು

ವಾಗೀಶ ಕರಜರು ರಾಮಚಂದ್ರಾರ್ಯ

ಈ ಗುರುಗಳಿಗೀರ್ವರು ಶಿಷ್ಯರು ಇಹರು

ಬಾಗುವೇ ಇವರ್ಗಳಿಗೆ ಸಂತೈಸಲೆಮ್ಮ 5

ಮೊದಲನೆಯವರು ವಿಭುದೇಂದ್ರ ತೀರ್ಥಾರ್ಯರು

ವಿದ್ಯಾನಿಧಿ ತೀರ್ಥಾರ್ಯರು ಅನಂತರವು

ವಿದ್ಯಾನಿಧಿ ಸುತ ರಘುನಾಥ ತೀರ್ಥರು

ವಂದಿಸುವೆ ಈ ಸರ್ವಗುರು ವಂಶಕ್ಕೆ 6

ರಘುನಾಥ ಕರಕಮಲ ಜಾತ ರಘುವರ್ಯರಿಗೂ

ರಘೂತ್ತಮ ವೇದವ್ಯಾಸ ವಿದ್ಯಾಧೀಶ

ವೇದನಿಧಿ ಸತ್ಯವ್ರತ ಸತ್ಯನಿಧಿ ಸತ್ಯನಾಥ

ಸತ್ಯಾಭಿನವ ಸತ್ಯಪೂರ್ಣರಿಗೆ ನಮಿಪೆ 7

ಸತ್ಯಪೂರ್ಣ ತೀರ್ಥರಿಗೆ ಶಿಷ್ಯರು ಇಬ್ಬರು

ಸತ್ಯವರ್ಯ ತೀರ್ಥರು ಮೊದಲನೆಯವರು

ಸತ್ಯವಿಜಯ ತೀರ್ಥರು ಎರಡನೆ ಶಿಷ್ಯರು

ವಂದನಾದಿ ಮರ್ಯಾದೆ ಮಾಳ್ಪುದು ಜೇಷ್ಠರಿಗೆ 8

ಸತ್ಯವರ್ಯ ತೀರ್ಥರೇ ಮುಂದಕ್ಕೆ ಸತ್ಯಪ್ರಿಯ

ರೆಂದು ಕರೆಸಿಕೊಂಡರು ವಿರಾಗಿಕೋವಿದರು

ಸುಂದರ ದೇಶವು ಗೋದಾವರೀ ಕ್ಷೇತ್ರಕ್ಕೆ

ಸತ್ತತ್ವ ಬೋಧಿಸಲು ವಿಜಯ ಮಾಡಿದರು 9

ಸತ್ಯ ವಿಜಯರು ಗುರು ಆಜ್ಞೆಯಿಂ ತಾವೂನೂ

ತತ್ವ ಬೋಧ ಸಂಚಾರ ಮಾಡಿದರು ಆಗ

ಸತ್ಯಪೂರ್ಣ ತೀರ್ಥರು ತಾವೇ ಕರ್ನಾಟಕ

ಪ್ರಾಂತ್ಯಕ್ಕೆ ಹೊರಟರು ದಿಗ್ವಿಜಯಕಾಗಿ10

ಸತ್ಯವರ್ಯ ತೀರ್ಥರು ಭಾವಿ ಸತ್ಯಪ್ರೀಯರು

ಗೋದಾವರೀ ತೀರ ವಿಜಯ ಮಾಡುವಾಗ

ಭೂದೇವ ನರದೇವಪುರಿ ನಗರ ಪ್ರಮುಖರು

ಉತ್ಸಾಹದಿ ಭಕ್ತಿ ಮರ್ಯಾದೆ ಮಾಡಿದರು 11

ಬಿಸಾಜಿಪಂತ ನಾರಾಯಣ ನರಳೀಪಂತ

ವಿಶ್ವಾಸದಿ ಇಂಥಾ ಪ್ರಮುಖ ಜನರು

ಈ ಸಂನ್ಯಾಸ ರತ್ನ ಸತ್ಯಪ್ರಿಯ ಆರ್ಯರಿಗೆ

ಸ್ವಾಗತ ಪೂಜೆ ಮಾಡಿದ್ದು ಖ್ಯಾತ12

ಸಜ್ಜನರು ದೊಡ್ಡವರು ನಾಯಕರು ಗುರುಗಳ

ಪೂಜಿಸುವ ಸಮಯ ಬಂದು ಅಲ್ಲಿ ಮೊದಲನೆ

ಬಾಜೀರಾವ್ ಎಂಬಂಥ ಅರಸನು ಅವನೂ ಸಹ

ನಿಜ ಭಕ್ತಿ ಭಾವದಿಂದಲಿ ಪೂಜಿಸಿದ 13

ತಾನು ಪೂಜಿಸಿ ಗ್ರಾಮ ದಾನ ಮಾಡಿದ್ದಲ್ಲದೆ

ಘನ ಮಹಾತ್ಮ ಸ್ವಾಮಿಗಳ ಪೂಜಿಸಿರೆಂದು

ತ್ನನ ಮುದ್ರೆ ಪತ್ರ ಬೇರೆ ರಾಜರ್ಗೆ ಕಳುಹೆಂದು

ತನ್ನ ಸಹ ಬಂದಿದ್ದ ಮಂತ್ರಿಗೆ ಹೇಳಿದನು 14

ಗೋದಾವರೀ ತೀರ ಸ್ಥಳಗಳಲಿ ಈ ರೀತಿ

ಸತ್ಯಪ್ರಿಯ ಆರ್ಯರು ಸಂಚರಿಸಲಾಗ

ಸತ್ಯ ಪೂರ್ಣ ತೀರ್ಥರು ದಕ್ಷಿಣದಲ್ಲಿ

ಕ್ಷೇತ್ರಾಟನದಿ ಇರುತಿದ್ದರು ಮುದದಿ 15

ಸತ್ಯಪೂರ್ಣರಿರುತ್ತಿದ್ದ ಸಂಚಾರ ಸ್ಥಳದ

ಹತ್ತಿರವೆ ಕೊಂಗು ನಾಡು ತೋಂಡ ದೇಶ

ಸತ್ಯವಿಜಯರು ಅಲ್ಲಿ ಸಂಚರಿಸಿ ಬಂದರು

ಸತ್ಯ ಪೂರ್ಣರು ಹರಿ ಪಾದ ಸೇರುವಾಗ 16

ಸತ್ಯವಿಜಯರ ಕೈಗೆ ಸಂಸ್ಥಾನ ಬರಲು

ಸತ್ಯಭಿನವ ಸತ್ಯಪೂರ್ಣರ ಪದ್ಧತಿ

ಯಂತೆ ಸಂಸ್ಥಾನ ಆಡಳಿತ ಮಾಡುತ್ತಾ

ಮತ್ತೂ ತೋಂಡ ದೇಶ ಸಂಚಾರಕ್ಕೆ ಹತ್ತಿದರು 17

ಎನ್ನ ಎನ್ನಂಥವರ ಅನಂತ ಅಪರಾಧಗಳ

ಘನ ದಯದಿ ಕ್ಷಮಿಸಿ ಬಹು ಕೃಪದಿ ಪಾಹೀ

ವನರುಹಾಸನಪಿತ ಮಧ್ವಸ್ಥ ಶ್ರೀಪತಿ

`ಪ್ರಸನ್ನ ಶ್ರೀನಿವಾಸ' ಪ್ರಿಯ ಸತ್ಯಪ್ರಿಯ ಆರ್ಯ 18 

***