Showing posts with label ಪತಿತನ್ನ ಪಾವನ ಮಾಡುವ ರಂಗಾ ಗತಿಯಿಲ್ಲದವರಿಗೆ vijaya vittala. Show all posts
Showing posts with label ಪತಿತನ್ನ ಪಾವನ ಮಾಡುವ ರಂಗಾ ಗತಿಯಿಲ್ಲದವರಿಗೆ vijaya vittala. Show all posts

Wednesday, 16 October 2019

ಪತಿತನ್ನ ಪಾವನ ಮಾಡುವ ರಂಗಾ ಗತಿಯಿಲ್ಲದವರಿಗೆ ankita vijaya vittala

ವಿಜಯದಾಸ
ಪತಿತನ್ನ ಪಾವನ ಮಾಡುವ ರಂಗಾ |
ಗತಿಯಿಲ್ಲದವರಿಗೆ ಗತಿಯೇ ನೀನೇ ಗತಿ ಪ

ನಿಂದಿರಲು ನೆರಳಿಲ್ಲ ನಿಲ್ಲಲು ನೆಲೆಯಿಲ್ಲ |
ತಂದಿ-ತಾಯಿಯೆಂಬೋರು ಮೊದಲೆ ಇಲ್ಲ||
ಒಂದು ಸಂಗತಿ ಇಲ್ಲ ಪಡದಾನಂದನರಿಲ್ಲ |
ಬಂದು-ಬಳಗದವರು ಆರಿಲ್ಲ ಹರಿಯೇ 1

ಕುಡಿಯಲು ನೀರಿಲ್ಲ ಕಾಲಿಡಲು ಇಂಬಿಲ್ಲಾ |
ಪಿಡಿವೆನೆಂದರೆ ಮೇಲೆ ಕೊಡೆಯಿಲ್ಲ ||
ಒಡನೆ ಬರುವರಾರಿಲ್ಲ ಸಂಗಡದಿ |
ಆಡಿವೆನೆಂದರೆ ವಳ್ಳಿಗಾಯಿತೊ ಹರಿಯೆ 2

ಧೈರ್ಯ ಕೊಡುವವರು ಇಲ್ಲ ದಾತರೊಬ್ಬರಿಲ್ಲ |
ಕಾರ್ಯವೆಂದರೆ ಕೇಳಿ ಅರಿವರಿಲ್ಲಾ ||
ವೀರ್ಯವು ಎನಗಿಲ್ಲ ವಸಿಷ್ಠನು ನಾನಲ್ಲ |
ಧೈರ್ಯವು ದು:ಖವು ವೆಗ್ಗಳಿಸಿತೋ ಹರಿಯೆ 3

ತನ್ನವರು ತನಗಿಲ್ಲ ತಾಳು ಎಂಬುವರಿಲ್ಲ |
ಸಣ್ಣ ಮನಸ್ಸು ಅಲ್ಲದೇ ಘನವು ಯಿಲ್ಲ ||
ಕರ್ಮ ಬೆನ್ನ ತೊಲಗಲಿಲ್ಲ |
ಇನ್ನು ಜನ್ಮ ವ್ಯರ್ಥವಾಯಿತೊ ಹರಿಯೇ 4

ಪಾದ |
ಸಾಕಾರ ಮಾಡಿಕೊಂಬುವರ ಸಂಗಡ ||
ಶ್ರೀಕಾಂತ ವೆಂಕಟ ವಿಜಯವಿಠ್ಠಲರೇಯ |
ನೀ ಕರುಣಸಿದರೆ ಸಕಲಾರ್ಥವಹುದು 5
***

pallavi

patitanna pAvana mADuva rangA gatiyilladavarige gatiyE nInE gati

caraNam 1

nindiralu neraLlla nllalu nelayilla tandi tAyi embOru modale illA
ondu sangatiyillA paDadAnandanarillA bandhu balagadavaru Arilla hariye

caraNam 2

kuDiyalu nIrilla kAliDalu imbilla piDivenendare mEle koDeyillA
oDane baruvavarArlilla sangaDadi ADivenendare vaLLigAyito hariye

caraNam 3

dhairya koDuvavru illa dhAtarobbarilla kAryavendare kELi arivarilla
vIryau enagillA vasiSTanu nAnalla dhairyau duhkavu veggaLisito hariye

caraNam 4

tannavoru tanagilla tALu embavarilla saNNa manasu allade ghanavu illa
munna mADida karma benna tolagalilla innu janma vyarthavAyitu hariye

caraNam 5

sAku I duSkrta bEku ninnaye pAda sAkAra mADikombavara sangaLa
shrIknta venkaTa vijayaviTharEya nI karuNisidare sakalArtha vahudu
***