Showing posts with label ಶಿಲೆಯ ನಾರಿಯ ಮಾಡ್ದ ಹನುಮ ನಿಲಯಾ jayesha vittala. Show all posts
Showing posts with label ಶಿಲೆಯ ನಾರಿಯ ಮಾಡ್ದ ಹನುಮ ನಿಲಯಾ jayesha vittala. Show all posts

Thursday, 5 August 2021

ಶಿಲೆಯ ನಾರಿಯ ಮಾಡ್ದ ಹನುಮ ನಿಲಯಾ ankita jayesha vittala

 ..

ರಾಗ - : ತಾಳ -


ಶಿಲೆಯ ನಾರಿಯ ಮಾಡ್ದ ಹನುಮ ನಿಲಯಾ ll ಪ ll


ನೆಲೆಯಿಲ್ಲದಾ ಮಹಿಮ ಶ್ರೀರಾಮ ಗೋಚರಿಸೊ ll ಅ ಪ ll


ಶ್ರುತಿಗಗೋಚರ ನೀನು ಸರ್ವೇಶ ಸ್ವಾತಂತ್ರ ನೀನು

ಕೃತಿಮಗ್ನ ಪಶು ನಾನು ಗೋಪಾಲದೇವ

ಮೃತಿ ಭೀತಿ ವಶನಾಗಿ ನೆಲೆತಪ್ಪಿ ಪೋಗುತಿಹೆ

ಅತಿಭಯದಿ ನಡುಗುವೆ ಹೇ ಶ್ರುತಿನಾಥ ಪೊರೆ ಎನ್ನ ll 1 ll


ಪರಮ ಮಂಗಳ ಅನಿಲದೇವ ಮಂದಿರ ಶ್ರೀಶ

ಪರತತ್ವ ಪರಮಾತ್ಮ ಪಿಡಿಯೊ ಕರವ

ಮರುವೆಂಬ ಮಾರಿಯನು ನಿರ್ಮೂಲ ಮಾಡಯ್ಯ

ದೊರಿ ನಿನ್ನ ಸ್ಮೃತಿ ಸತತ ಅಚ್ಛಿನ್ನವಾಗಿರಲಿ ll 2 ll


ನೀನು ನಿನ್ನವರಿಂದ ಕೂಡಿ ತನುರಥದಲ್ಲಿ

ಭಾನು ಕೋಟಿ ತೇಜ ಶ್ರೀ ಕ್ರೀಡೆಮಾಳ್ಪ 

ಜ್ಞಾನ ಪಾಲಿಸು ಎನಗೆ ಜಯೇಶವಿಟ್ಠಲ

ಆನಿ ಅಜಮಿಳ ಅನಿಮಿತ್ತ ಬಾಂಧವನೆ ll 3 ll

***


ಶಿಲೆಯ ನಾರಿಯ ಮಾಡ್ದ ಹನುಮ ನಿಲಯಾ ಪ


ನೆಲೆಯಿಲ್ಲದಾ ಮಹಿಮ ಶ್ರೀರಾಮ ಗೋಚರಿಸೊ ಅ.ಪ


ಶ್ರುತಿಗಗೋಚರ ನೀನು ಸರ್ವೇಶ ಸ್ವಾತಂತ್ರ ನೀನು

ಕೃತಿಮಗ್ನ ಪಶು ನಾನು ಗೋಪಾಲದೇವ

ಮೃತಿ ಭೀತಿ ವಶನಾಗಿ ನೆಲೆತಪ್ಪಿ ಪೋಗುತಿಹೆ

ಅತಿಭಯದಿ ನಡುಗುವೆ ಹೇ ಶ್ರುತಿನಾಥ ಪೊರೆ ಎನ್ನ 1


ಪರಮ ಮಂಗಳ ಅನಿಲದೇವ ಮಂದಿರ ಶ್ರೀಶ

ಪರತತ್ವ ಪರಮಾತ್ಮ ಪಿಡಿಯೊ ಕರವ

ಮರುವೆಂಬ ಮಾರಿಯನು ನಿರ್ಮೂಲ ಮಾಡಯ್ಯ

ದೊರಿ ನಿನ್ನ ಸ್ಮøತಿ ಸತತ ಅಚ್ಛಿನ್ನವಾಗಿರಲಿ 2


ನೀನು ನಿನ್ನವರಿಂದ ಕೂಡಿ ತನುರಥದಲ್ಲಿ

ಭಾನು ಕೋಟಿ ತೇಜ ಶ್ರೀ ಕ್ರೀಡೆಮಾಳ್ಪ

e್ಞÁನ ಪಾಲಿಸು ಎನಗೆ ಜಯೇಶವಿಠಲ

ಆನಿ ಅಜಮಿಳ ಅನಿಮಿತ್ತ ಬಾಂಧವನೆ 3

****