Showing posts with label ಶಂಭು ಸ್ವಯಂಭುಗಳ ಹೃದಂಬರಕಿಂದು ಬಿಂಬದಂತಿಹ ಕಂಬುಧರನ hayavadana. Show all posts
Showing posts with label ಶಂಭು ಸ್ವಯಂಭುಗಳ ಹೃದಂಬರಕಿಂದು ಬಿಂಬದಂತಿಹ ಕಂಬುಧರನ hayavadana. Show all posts

Wednesday, 1 September 2021

ಶಂಭು ಸ್ವಯಂಭುಗಳ ಹೃದಂಬರಕಿಂದು ಬಿಂಬದಂತಿಹ ಕಂಬುಧರನ ankita hayavadana

 ..

ಶಂಭು ಸ್ವಯಂಭುಗಳ ಹೃದಂಬರಕಿಂದು-ಬಿಂಬದಂತಿಹ ಕಂಬುಧರನ ನಂಬು ಮನುಜಡಂಬ ಮತವ ಹಂಬಲಿಸದೆ ಪ.


ಕೃದ್ಧ ಖಳರ ಗೆದ್ದು ವೇದವೇದ್ಯವೆನಿಪ ಶುದ್ಧಸುಧೆಯಉದ್ಧರಿಸಿದ ಮಧ್ವಮುನಿ ಪ್ರಸಿದ್ಧವರಗೆ ಊಧ್ರ್ವಹರಿಯಹೊದ್ದಿ ಬದುಕು ಊಧ್ರ್ವಪುಂಡ್ರ ಶ್ರೀಮುದ್ರೆಯನ್ನುಸದ್ವ್ರತಿಯಾಗು ವೃದ್ಧರಂಘ್ರಿಪದ್ಮಕೆರಗು ಕದ್ಯಕರಗದಾದ್ವವ (?) ಬಿಡು 1


ವ್ಯರ್ಥ ವಿತ್ತ ಪುತ್ರಮಿತ್ರರರ್ಥಿಗೆ ಸುತ್ತ ತಿರುಗುತಿರದೆತೀರ್ಥಕ್ಷೇತ್ರಯಾತ್ರೆಗಳನು ಹೊತ್ತು ಹೊತ್ತಲಿ ವರ್ತಿಸುತಿರುಭಕ್ತರೆ ನಿನ್ನ ಮಿತ್ರರು ಹರಿಭಕ್ತಿಯ ನಿನಗಿತ್ತು ಮತ್ತೆಮುಕ್ತಿಪಥವ ಹತ್ತುವ ಸಂಪತ್ತ ನಿನ್ನತ್ತ ಮಾಡು 2


ಕೋಪವ ಕಳೆ ತಾಪವ ತಾಳು ಪಾಪದ ಬಲು ಲೇಪಕಂಜುಭೂಪರ ಸೇವೆ ಆಪತ್ತಿಹುದು ತಾಪಸರ ಸಮೀಪವ ಸೇರುಶ್ರೀಪತಿ ಹಯವದನನ ಪದದೀಪದ ಬೆಳಕಿನಲಿ ವಿಷಯಕೂಪವ ಕಳೆದಾಪರಮನಲಿ ಪರಸೇವೆಲಾ [ಪೂ]ರನಾಗು 3

***