Showing posts with label ಬಾರೋ ಗೋಪಾಲ ಬಾಲ ಸುಶೀಲ kamalanabha vittala BAARO GOPALA BAALA SUSHEELA. Show all posts
Showing posts with label ಬಾರೋ ಗೋಪಾಲ ಬಾಲ ಸುಶೀಲ kamalanabha vittala BAARO GOPALA BAALA SUSHEELA. Show all posts

Tuesday, 7 December 2021

ಬಾರೋ ಗೋಪಾಲ ಬಾಲ ಸುಶೀಲ ankita kamalanabha vittala BAARO GOPALA BAALA SUSHEELA

by ನಿಡಗುರುಕಿ ಜೀವೂಬಾಯಿ
ಬಾರೋ ಗೋಪಾಲ ಬಾಲ ಸುಶೀಲದೇವಕಿ ಬಾಲಕಂಸಾರಿಶ್ರೀಲೋಲ ಪ 
ಗುರುಳು ಕೂದಲು ಹೊಸ ಅರಳೆಲೆಹೊಳಪುಕೊರಳ ಕೌಸ್ತುಭಹಾರ ಸರಗಳ ಝಳಪು 1

ಮುದ್ದು ಬಾಲನೆ ಹೊಸ ಬೆಣ್ಣೆಮುದ್ದೆಯ ನೀವೆಸದ್ದು ಮಾಡದೆ ಬಾರೊ ಉದ್ಧವÀಸಖನೆ 2

ಕಂಠದೊಳಸಲಿ ವೈಕುಂಠ ಶ್ರೀಪತಿಗೆಸೊಂಟಗೆಜ್ಜೆಯು ಕಿರುಗಂಟಿಗಳೊಲಿಯೆ 3

ಭಕ್ತಿಯಿಂದಲಿ ಕರವೆತ್ತಿ ಪ್ರಾರ್ಥಿಸುವೆನುಅಪ್ರಮೇಯನೆ ಪುರುಷೋತ್ತಮ ನಮಿಪೆ 4

ಕರುಣದಿಂದಲಿ ಬಾರೊಕಮಲಸಂಭವನಯ್ಯಕಮಲನಾಭ ವಿಠ್ಠಲ ನಮಿಸುವೆ ಸತತ 5
***