Showing posts with label ರಘುಪತಿಯೆ ನಿನ್ನನ್ನೆ ಪೊಗಳುವ ಪದಗಳನುಸೊಗಸಾಗಿ ರಚಿಪಂತೆ ಬಗೆಯನ್ನು ನೀಡೋ gadugina veeranarayana. Show all posts
Showing posts with label ರಘುಪತಿಯೆ ನಿನ್ನನ್ನೆ ಪೊಗಳುವ ಪದಗಳನುಸೊಗಸಾಗಿ ರಚಿಪಂತೆ ಬಗೆಯನ್ನು ನೀಡೋ gadugina veeranarayana. Show all posts

Wednesday, 1 September 2021

ರಘುಪತಿಯೆ ನಿನ್ನನ್ನೆ ಪೊಗಳುವ ಪದಗಳನುಸೊಗಸಾಗಿ ರಚಿಪಂತೆ ಬಗೆಯನ್ನು ನೀಡೋ ankita gadugina veeranarayana

 ..

kruti by ವೀರನಾರಾಯಣ Veeranarayana 


ರಘುಪತಿಯೆ ನಿನ್ನನ್ನೆ ಪೊಗಳುವ ಪದಗಳನುಸೊಗಸಾಗಿ ರಚಿಪಂತೆ ಬಗೆಯನ್ನು ನೀಡೋ ಪ


ಪರರ ಪೊಗಳಿಕೆ ಬೇಡ ಪರರ ತೆಗಳಿಕೆ ಬೇಡಪರಮಪಾವನ ನಿನ್ನ ಮಹಿಮೆಯನು ಬಣ್ಣಿಸುವಸರಸ ನುಡಿಗಳು ಬಾಯೆ ಬರುವಂತೆ ಮಾಡೊ 1


ಒಂದು ಲಕ್ಷದ ನಾಮದೊಂದು ಮಣಿಮಾಡಿಕುಂದದಿಹ ಭಕ್ತಿಗುಣದಿಂದ ಪೋಣಿಸಿ ಪದ್ಯದಂಥ ಹಾರವ ಮಾಡಿ ನಿನ್ನೆಡೆಗೆ ಅರ್ಪಿಸಲುಮಂದ ಬುದ್ಧಿಯ ನನಗೆ ಶಕ್ತಿಯನೀಡೋ 2


ರಾಗ ನಿನಗೆಯೆ ತಾಳ ನಿನಗೆಯೆ ಗೊತ್ತುರಾಗ ತಾಳಗಳ ಮೇಳ ನನಗೇನು ಗೊತ್ತುರಾಗತಾಳಗಳಲ್ಲಿ ಹಗುರಾಗಿ ಹಾಡಲಿಕೆತೂಗಿ ಶಬ್ದಗಳಿಡಲು ಸನ್ಮತಿಯ ನೀಡೋ 3


ಸುರವರನೆ ಬೇಕಯ್ಯ ನಿನ್ನ ಪ್ರೇರಣೆ ಇದಕೆವರಕವಿಯು ಸು ಕುಮಾರವ್ಯಾಸನಿಗೆ ವರವಿತ್ತುಉರುತರದ ಕನ್ನಡದಿ ಭಾರತವ ಬರೆಯಿಸಿದತೆರದಿ ಗದುಗಿನ ವೀರನಾರಾಯಣನೆ ಸಲಹೊ 4

***