Showing posts with label ಪಾಹಿ ಪದ್ಮದಳಾಯತಾಂಬಕ ಪಾಹಿ jagannatha vittala. Show all posts
Showing posts with label ಪಾಹಿ ಪದ್ಮದಳಾಯತಾಂಬಕ ಪಾಹಿ jagannatha vittala. Show all posts

Saturday, 14 December 2019

ಪಾಹಿ ಪದ್ಮದಳಾಯತಾಂಬಕ ಪಾಹಿ ankita jagannatha vittala

ಜಗನ್ನಾಥದಾಸರು
ಪಾಹಿ ಪದ್ಮದಳಾಯತಾಂಬಕ ಪಾಹಿ ಪದ್ಮಾರಮಣ ಪರಾತ್ಪರ
ಪಾಹಿ ಪದ್ಮಾಸನ ಜನಕ ಮಾಂ ಪಾಹಿ ಪ್ರಪನ್ನ ಪಾಲಕ ಪ

ವಾಸುದೇವ ಕೃತೀಶ ಶಾಂತಿಪ
ಕೇಶವಾಚ್ಯುತ ವಾಮನ ಹೃಷೀಕೇಶ
ಪ್ರಶ್ನಿಗರ್ಭ ಋಷಭ ನೃಕೇಸರಿ ಹಯಗ್ರೀವ ವೇದ
ವ್ಯಾಸ ದತ್ತಾತ್ರಯ ಉರುಕ್ರಮಾ
ವಾಸವಾನುಜ ಕಪಿಲ ಯಜ್ಞ ಮ
ಹೇಶ ಧನ್ವಂತ್ರಿ ಹಂಸ ಮಹಿ
ದಾಸ ನಾರಾಯಣ ಕೃಷ್ಣಹರೆ 1

ಮಾಧವ ಪ್ರದ್ಯುಮ್ನ ಶ್ರೀ ದಾಮೋದ
ರಾಧೋಕ್ಷಜ ಜನಾರ್ದನ ಶ್ರೀಧರ ಶ್ರೀ
ಪದ್ಮನಾಭ ವೃಕೋದರ ಪ್ರಿಯತಮ ತ್ರಿವಿಕ್ರ
ವಿರಿಂಚಿ ವಿನುತ
ಗದಾಧರ ಗಯಾಸುರ ವಿಮರ್ದನ
ಸಾಧಿತ ಜಗತ್ರಯ ಪುರಾತನ
ಪಾದ ಪರಮ ಕೃಪಾಂಬುಧೇ ಮಾಂ 2

ನಂದಗೋಪನ ಕುಮಾರ ಗೋಪಿ
ವೃಂದ ಪೋಷಿತನಮಿತ ಸಂಕ್ರಂಡನ ಕೃಪಾ
ಸಾಂದ್ರ ವರ ಕಾಳಿಂದಿ ತಟನಿ ವಿಹಾರ ಪಾಂಡವ
ಬಂಧು ದ್ರೌಪದಿವರದ ನೃಪ ಮುಚು
ಕುಂದಸ್ತುತಿ ಸಂಪ್ರೀತ ಲಕ್ಷ್ಮೀ
ನಂದಮಯ ನಿಜ ಭಕ್ತವತ್ಸಲ 3

ಮೀನಕೂರ್ಮವರಾಹ ಪಂ
ದಿತಿಸುತ ವಾಮನ
ಕ್ಷೋಣಿಪಾರ್ವನ ಬ್ರಾಹ್ಮಣ ಪ್ರಿಯ
ವನೌಕಸನಾಥ ಮುಖ್ಯ
ಪ್ರಾಣಸಖ ವಸುದೇವ ದೇವಕಿ
ಸೂನು ಸುಂದರಕಾಯ ಪುರಹರ
ಬುದ್ಧ ಕಲ್ಕಿ ಪ್ರ
ಧಾನ ಪುರುಷೇಶ್ವರ ದಯಾಕರ 4

ನಿಂತ ನಿಜಬಲ ಮಾತುಳಾಂತಕ
ಶ್ವೇತವಾಹನ ಸೂತ ತ್ರಿಗುಣಾ
ತೀತ ಭವನಿಧಿ ಪೋತ ಮೋಕ್ಷನಿ
ಕೇತನಪ್ರದ ಭೂತಭಾವ ಧೌತ ಪಾಪ
ವ್ರಾತ ತ್ರಿಜಗತಾತ ನಿರ್ಗತ ಭೀತ
ಶ್ರುತಿ ವಿಖ್ಯಾತ ಭಕ್ತಿಸುವೇತನ ಪ್ರಿಯ
ಭೂತಿದ ಜಗನ್ನಾಥ ವಿಠ್ಠಲ 5
*******